ಪುತ್ತೂರು, ಮಾರ್ಚ್ 25, 2022 (ಕರಾವಳಿ ಟೈಮ್ಸ್) : ತಾಲೂಕಿನ ಬಲ್ನಾಡು-ಉಜ್ರುಪಾದೆ ಶಿವಪ್ರಸಾದ್ ಭಟ್ ಅವರ ಮನೆಯಲ್ಲಿ ಫೆ 26 ರಂದು ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆಗಿಳಿದ ಪುತ್ತೂರು ಪೊಲೀಸರ ವಿಶೇಷ ತಂಡವು ಕೇರಳ-ಕರ್ನಾಟಕದಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದ ಅಂತಾರಾಜ್ಯ ಕುಖ್ಯಾತ ಇಬ್ಬರು ಖದೀಮರಾದ ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ದಿವಂಗತ ಮೊಯಿದಿನ್ ಎಂಬವರ ಪುತ್ರ ಮುಹಮ್ಮದ್ ಅಶ್ರಫ್ ಯಾನೆ ತಾರಿಗುಡ್ಡೆ ಅಶ್ರಫ್ ಯಾನೆ ಮನ್ಸೂರು ಯಾನೆ ಕಳ್ಳ ಅಶ್ರಫ್ (42) ಹಾಗೂ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಸಮೀಪದ ಸೆಯ್ಯದ್ ಮಲೆ-ಗುಂಪಕಲ್ಲು ನಿವಾಸಿ ಯೂಸುಫ್ ಎಂಬವರ ಪುತ್ರ ಕೆ ಮುಹಮ್ಮದ್ ಸಲಾಂ ಎಂಬವರನ್ನು ಬಲೆಗೆ ಕೆಡಹುವಲ್ಲಿ ಸಫಲರಾಗಿದ್ದಾರೆ.
ಬಲ್ನಾಡು ಉಜ್ರುಪಾದೆ ಶಿವಪ್ರಸಾದ್ ಭಟ್ ಅವರ ಮನೆಯ ಬೀಗ ಒಡೆದು ಫೆ 26 ರಂದು ಸುಮಾರು 160 ಗ್ರಾಂ ಚಿನ್ನಾಭರಣ ಕಳವಾಗಿದ್ದ ಬಗ್ಗೆ ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ರಿ ಪ್ರಕರಣದ ಬಗ್ಗೆ ಕಾರ್ಯಾಚರಣೆ ನಡೆಸಿದ ಪೆÇಲೀಸರು ಕೊನೆಗೂ ಕುಖ್ಯಾತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಇಬ್ಬರು ಆರೋಪಿಗಳೂ ಕೂಡಾ ಕೇರಳ ಮತ್ತು ಕರ್ನಾಟಕದ ಅನೇಕ ಕಡೆ ಕಳ್ಳತನ ಮಾಡಿದ್ದು, ಉಪ್ಪಿನಂಗಡಿ, ಸುಳ್ಯ, ಬೆಳ್ಳಾರೆ, ಪುತ್ತೂರು ನಗರ, ಧರ್ಮಸ್ಥಳ, ಬಂಟ್ವಾಳ, ವಿಟ್ಲ, ಕೇರಳದ ಮಲ್ಲಪುರಂ ಕೊಂಡೆಟ್ಟಿ, ಆದೂರು, ಕೊಡಗಿನ ಸೊಮವಾರಪೇಟೆ ಠಾಣೆಗಳಲ್ಲಿ ಮನೆ, ಅಂಗಡಿ, ದೇವಸ್ಥಾನ, ಎಪಿಎಂಸಿ ಕೇಂದ್ರ ಕಳ್ಳತನ ಸಹಿತ ಅನೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರಿಗೆ ಬೇಕಾಗಿದ್ದವರಾಗಿದ್ದಾರೆ. ಆರೋಪಿಗಳ ಪತ್ತೆಗೆ ವಿವಿಧ ನ್ಯಾಯಾಲಯಗಳಿಂದ ವಾರಂಟ್ ಕೂಡಾ ಜಾರಿಯಾಗಿದ್ದರೂ ಇಬ್ಬರೂ ತಲೆಮರೆಸಿಕೊಂಡು ಕೃತ್ಯ ಮುಂದುವರಿಸಿದ್ದರು.
ಬಂಧಿತ ಆರೋಪಿಗಳಿಂದ ಪೊಲೀಸರು 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ಸಿಸಿ ಕ್ಯಾಮರ ಡಿವಿಆರ್, ಲ್ಯಾಪ್‍ಟಾಪ್ ಮತ್ತು ಕಳ್ಳತನಕ್ಕೆ ಉಪಯೋಗಿಸಿದ ಬೈಕ್ ಸೇರಿದಂತೆ ಒಟ್ಟು 6.5 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾದ ಮೇಲಿನ ಎಲ್ಲಾ ಪ್ರಕರಣಗಳನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಪುಣಚ ಗ್ರಾಮದ ಅಜ್ಜನಡ್ಕ ಮಹಮ್ಮದ್ ಆಲಿ ಅವರ ಮನೆ, ಬಲ್ನಾಡು ಗ್ರಾಮದ ವಿಷ್ಣುಮೂರ್ತಿ ದೈವಸ್ಥಾನ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕಾವು ಸಿರಿ ಭೂಮಿ ಕೃಷಿ ಉತ್ಪನ್ನ ಅಂಗಡಿ, ಭಟ್ಕಳ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ, ಕಾಸರಗೋಡು ಚೆರ್ಕಳದಲ್ಲಿ ಎರಡು ಮನೆಗಳಿಂದ ಕಳ್ಳತನ ಮಾಡಿರುವ ಕುರಿತು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ, ಎಡಿಶನಲ್ ಎಸ್ಪಿ ಕುಮಾರ ಚಂದ್ರ ಅವರ ಮಾರ್ಗದರ್ಶನದಲ್ಲಿ ಪುತ್ತೂರು ಡಿವೈಎಸ್ಪಿ ಡಾ ಗಾನ ಪಿ. ಕುಮಾರ್ ಅವರ ನೇತೃತ್ವದಲ್ಲಿ, ಪುತ್ತೂರು ಗ್ರಾಮಾಂತರ ಸರ್ಕಲ್ ಇನ್ಸ್‍ಪೆಕ್ಟರ್ ಉಮೇಶ್ ಯು, ಸಂಪ್ಯ ಎಸ್ಸೈಗಳಾದ ಉದಯ ರವಿ ಎಂ ವೈ, ಅಮೀನ್ ಸಾಬ್ ಅತ್ತಾರ್, ವಿಶೇಷ ಪೊಲೀಸ್ ತಂಡದ ಎಎಸ್‍ಐ ಮುರುಗೇಶ್, ಶಿವರಾಮ ಗೌಡ, ಧರ್ಣಪ್ಪ ಗೌಡ, ವರ್ಗಿಸ್, ಕೃಷ್ಣಪ್ಪ ಗೌಡ, ದೇವರಾಜ್, ಧರ್ಮಪಾಲ್, ಅದ್ರಾಂ, ಪ್ರವೀಣ್ ರೈ ಪಾಲ್ತಾಡಿ, ಜಗದೀಶ್ ಅತ್ತಾಜೆ, ಹರ್ಷಿತ್, ಗಿರೀಶ್, ಗುಡದಪ್ಪ ತೋಟದ್, ವಿನೋದ್, ಗಾಯತ್ರಿ, ಜಿಲ್ಲಾ ಗಣಕ ಯಂತ್ರ ವಿಭಾಗದ ಸಂಪತ್, ದಿವಾಕರ ಅವರು ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣ ನಡೆದು ಒಂದೇ ತಿಂಗಳಲ್ಲಿ ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸಿದ ಪೆÇಲೀಸ್ ತಂಡಕ್ಕೆ ಜಿಲ್ಲಾ ಎಸ್ಪಿ ಬಹುಮಾನ ಘೋಷಿಸಿದ್ದಾರೆ.
Good work
ReplyDeleteThis comment has been removed by the author.
DeleteTesting
Delete