ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಒಗ್ಗಿಸಿಕೊಳ್ಳುತ್ತಿರುವ ಅಂಚೆ ಕಚೇರಿಗಳು - Karavali Times ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಒಗ್ಗಿಸಿಕೊಳ್ಳುತ್ತಿರುವ ಅಂಚೆ ಕಚೇರಿಗಳು - Karavali Times

728x90

3 March 2022

ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಒಗ್ಗಿಸಿಕೊಳ್ಳುತ್ತಿರುವ ಅಂಚೆ ಕಚೇರಿಗಳು

ಮಂಗಳೂರು, ಮಾರ್ಚ್ 04, 2022 (ಕರಾವಳಿ ಟೈಮ್ಸ್) : 2022ರಲ್ಲಿ 1.5 ಲಕ್ಷ ಅಂಚೆ ಕಚೇರಿಗಳು ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿಯಲ್ಲಿ ಬರಲಿವೆ. ಈ ವ್ಯವಸ್ಥೆಯಿಂದಾಗಿ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಸ್.ಎಂ.ಎಸ್. ಬ್ಯಾಂಕಿಂಗ್ ಮುಖಾಂತರ ಖಾತೆಗಳ ನಿರ್ವಹಣೆಯನ್ನು ಮಾಡಬಹುದು. ಜೊತೆಗೆ ಪೆÇೀಸ್ಟ್ ಆಫೀಸಿನ ಖಾತೆಗಳ ಮತ್ತು ಬ್ಯಾಂಕ್ ಖಾತೆಗಳ ನಡುವೆ ಆನ್ ಲೈನ್ ಹಣ ವರ್ಗಾವಣಾ ಅನುಕೂಲತೆಯು ಲಭ್ಯವಾಗಲಿದೆ. ಈ ರೀತಿಯ ಬ್ಯಾಂಕ್ ಮತ್ತು ಪೆÇೀಸ್ಟ್ ಆಫೀಸಿನ ವ್ಯಾವಹಾರಿಕ ಕಾರ್ಯ ಸಾಧ್ಯತೆಯು ವಿಶೇಷವಾಗಿ ಗ್ರಾಮೀಣ ರೈತರಿಗೆ ಹಾಗೂ ಸಮಾಜದ ಹಿರಿಯ ನಾಗರಿಕರಿಗೆ ಸಹಾಯಕವಾಗಲಿದೆ. ಹಾಗೆಯೇ ವಿತ್ತೀಯ ವ್ಯವಹಾರವನ್ನು ಸುಲಭಗೊಳಿಸಲಿದೆ.

ಕೇಂದ್ರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯವು ದಿನಾಂಕ 23.02.2022ರಂದು ಬಜೆಟ್ ಘೋಷಣೆಯ ಅನುಷ್ಠಾನದ ಕುರಿತು ಅಂಚೆ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಗಳನ್ನು ಒಗ್ಗೂಡಿಸಿ ವೆಬಿನಾರ್ ಒಂದನ್ನು ಆಯೋಜಿಸಿತ್ತು. ಕರ್ನಾಟಕ ಅಂಚೆ ವಲಯದ ಚೀಫ್ ಪೆÇೀಸ್ಟ್ ಮಾಸ್ಟರ್ ಜನರಲ್ ಸಹ ಈ ವೆಬಿನಾರಿನಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಪ್ರಸ್ತಾಪಗೊಂಡ ಮುಖ್ಯಾಂಶಗಳು ಈ ಕೆಳಗಿನಂತಿವೆ.

1. ಸಭೆಯನ್ನು ಭಾರತದ ಪ್ರಧಾನ ಮಂತ್ರಿಗಳು ಉದ್ಘಾಟಿಸಿದರು. ಸರಕಾರದ ಎಲ್ಲಾ ಸಂಸ್ಥೆಗಳು ಹಾಗೂ ಮಧ್ಯಸ್ಥಿಕೆದಾರರು ಗ್ರಾಮ ಪಂಚಾಯತಿ ಮಟ್ಟದಲ್ಲಿ ಈ ಉದ್ದೇಶಕ್ಕಾಗಿ ಸಮನ್ವಯಗೊಳ್ಳಬೇಕಾದ ಅಗತ್ಯದ ಕುರಿತು ಹೆಚ್ಚಿನ ಒತ್ತು ನೀಡಲಾಯಿತು.

2. ಗ್ರಾಮೀಣ ಭಾಗದ ಡಿಜಿಟಲ್ (ಪಾರದರ್ಶಕ) ಆರ್ಥಿಕ ಒಳಗೊಳ್ಳುವಿಕೆ,  ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಕುರಿತು ಗಮನ ಹರಿಸಬೇಕು. ಈ ಕುರಿತು ಜಾಗೃತಿ ಮೂಡಿಸುವ ಮುಂದಾಳತ್ವವನ್ನು ಅಂಚೆ ಇಲಾಖೆಯು ನಿರ್ವಹಿಸಬೇಕಿದೆ. 

3. ಹಳ್ಳಿಗಳಲ್ಲಿ ಇರುವ ಅಂಚೆ ಕಛೇರಿಯ ಶಾಖೆಗಳನ್ನೂ ಸೇರಿಸಿ ಎಲ್ಲಾ ಅಂಚೆ ಕಛೇರಿಗಳೂ ಕೋರ್ ಬ್ಯಾಂಕಿಂಗ್  ಅಡಿಯಲ್ಲಿ ಬರಬೇಕು. ಆನ್ ಲೈನ್ ಹಣ ವರ್ಗಾವಣೆ ಸೇರಿದಂತೆ ಉಳಿದೆಲ್ಲಾ ಸೌಲಭ್ಯಗಳು ದೇಶದ ಮೂಲೆ ಮೂಲೆಗಳನ್ನು ತಲುಪಬೇಕು.

4. ಸಣ್ಣ ಉಳಿತಾಯದ ಪ್ರತಿನಿಧಿಗಳು, ಮಹಿಳಾ ಪ್ರಧಾನ ಕೇಂದ್ರೀಯ ಬಚತ್ ಯೋಜನೆ ಪ್ರತಿನಿಧಿಗಳು,  ಅಂಚೆ ಉಳಿತಾಯ ಖಾತೆದಾರರು, ಸ್ವ-ಸಹಾಯ ಸಂಘಗಳು ಮತ್ತು ಬ್ಯಾಂಕಿಂಗ್ ತಜ್ನರ ಅಭಿಪ್ರಾಯಗಳನ್ನು ಈ ವೆಬಿನಾರಿನಲ್ಲಿ ತೆಗೆದುಕೊಳ್ಳಲಾಯಿತು.

ಕರ್ನಾಟಕದಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 28 ಲಕ್ಷ ಫಲಾನುಭವಿಗಳಿಗೆ ಅಂಚೆ ಖಾತೆಯ ಮೂಲಕ ಸಾಮಾಜಿಕ ಭದ್ರತಾ ಪಿಂಚಣಿಯನ್ನು ತಲುಪಿಸಲಾಗಿದೆ. ರಾಜ್ಯ ಸರಕಾರದೊಂದಿಗೆ ಕೈಜೋಡಿಸಿ ಭಾಗ್ಯ ಲಕ್ಷ್ಮಿ ಯೋಜನೆಯಡಿಯಲ್ಲಿ ಅರ್ಹ ಹೆಣ್ಣು ಮಕ್ಕಳ ಹೆಸರಿನಲ್ಲಿ 1,56,056 ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆಸಲಾಗಿದೆ. ಈ ರೀತಿಯ ಬೃಹತ್ ಯೋಜನೆಗಳ ಮೂಲಕ ಕರ್ನಾಟಕ ಅಂಚೆ ವಲಯವು ಸಕ್ರಿಯವಾಗಿ ಆರ್ಥಿಕ ಒಳಗೊಳ್ಳುವಿಕೆಯ ಮೂಲ ಉದ್ದೇಶವನ್ನು ತಳಮಟ್ಟದವರೆಗೆ ಕೊಂಡೊಯ್ಯುವಲ್ಲಿ ಸಫಲವಾಗಿದೆ. ಮುಂಬರುವ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯ ಅನುಷ್ಠಾನವೂ ಸಹ ಇದೇ ವೇಗದಲ್ಲಿ ಕರ್ನಾಟಕದಲ್ಲಿ ಸಾಧ್ಯವಾಗಲಿದೆ. ಜನ ಸೇವೆಗೆ ಕರ್ನಾಟಕ ಅಂಚೆ ವಲಯವು ಕಂಕಣ ಬದ್ಧವಾಗಿದೆ ಎಂದು ವಲಯದ ಚೀಫ್ ಪೆÇೀಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಒಗ್ಗಿಸಿಕೊಳ್ಳುತ್ತಿರುವ ಅಂಚೆ ಕಚೇರಿಗಳು Rating: 5 Reviewed By: karavali Times
Scroll to Top