ಬಂಟ್ವಾಳ, ಮಾರ್ಚ್ 27, 2022 (ಕರಾವಳಿ ಟೈಮ್ಸ್) : ತಾಲೂಕಿನ ಮಣಿನಾಲ್ಕೂರು ಗ್ರಾಮದ ಟಾಂದಲ್ಕೆ ನಿವಾಸಿ ಸೇಸಪ್ಪ ಅವರ ಮನೆಗೆ ಶನಿವಾರ ರಾತ್ರಿ ನುಗ್ಗಿದ ಅಪರಿಚಿತರು ಮನೆಯಲ್ಲಿ ಒಂಟಿಯಾಗಿದ್ದ ವೃದ್ದೆಯ ಬಾಯಿಗೆ ಬಟ್ಟೆ ತುರುಕಿ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದಾರೆ.
ಸೇಸಪ್ಪ ನಾಯ್ಕ್ ತನ್ನ ತಾಯಿ ಮುತ್ತು ಅವರನ್ನು ಮನೆಯಲ್ಲಿ ನಿಲ್ಲಿಸಿ ಪತ್ನಿ ಪ್ರೇಮಾ ಜೊತೆಗೂಡಿ ಬಾಚಕೆರೆ ಬ್ರಹ್ಮಕಲಶಕ್ಕೆ ತೆರಳಿದ್ದ ಸಂದರ್ಭ ಆಗಮಿಸಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಒಂಟಿ ವೃದ್ದೆಯನ್ನು ಬೆದರಿಸಿ ಈ ಕೃತ್ಯ ನಡೆಸಿದ್ದು, ಮುತ್ತು ಅವರ ಕಿವಿಯಲ್ಲಿದ್ದ ಬೆಂಡೋಲೆ ಸಹಿತ ಮನೆಯೊಳಗೆ ಕಪಾಟಿನಲ್ಲಿದ್ದ ಕರಿಮಣಿ ಸರ ಹಾಗೂ ಉಂಗುರವನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳರು ದೋಚಿದ ಚಿನ್ನಾಭರಣ ಒಟ್ಟು 4.30 ಪವನ್ ತೂಕ ಹೊಂದಿದೆ ಎನ್ನಲಾಗಿದೆ.
ಸೇಸಪ್ಪ ನಾಯ್ಕ್ ದಂಪತಿ ನಾಟಕ ಮುಗಿಸಿ ರಾತ್ರಿ ಸುಮಾರು 2.30ರ ವೇಳೆಗೆ ವಾಪಾಸು ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಥೋರಾಟ್ ನೇತೃತ್ವದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳವನ್ನೂ ಕರೆಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment