ಬಂಟ್ವಾಳ, ಮಾರ್ಚ್ 27, 2022 (ಕರಾವಳಿ ಟೈಮ್ಸ್) : ತಾಲೂಕಿನ ಕರೋಪಾಡಿ ಗ್ರಾಮದ ಮದರಮೂಲೆಯಲ್ಲಿ ಬಾವಿಗೆ ಕೋಳಿ ಮರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ವೇಳೆ ಬಾವಿಯ ಕಟ್ಟೆ ಕುಸಿದು ಬಾವಿಗೆ ಬಿದ್ದು ಸ್ಥಳೀಯ ನಿವಾಸಿ ದಿವಂಗತ ಮುದ್ದ ಮುಗೇರರ ಪುತ್ರ ವಸಂತ ಮುಗೇರ (37) ಶನಿವಾರ ಮೃತಪಟ್ಟಿದ್ದಾರೆ.
ಕೇರಳ ರಾಜ್ಯದ ಉಪ್ಪಳದಲ್ಲಿ ವಿದ್ಯುತ್ ಗುತ್ತಿಗೆದಾರ ಕಾರ್ಮಿಕನಾಗಿದ್ದ ವಸಂತ ಕೇರಳದಲ್ಲಿ ನಡೆಯುತ್ತಿರುವ ಖಾಸಗಿ ಬಸ್ ಮುಷ್ಕರ ಕಾರಣದಿಂದಾಗಿ ರಜೆಯಲ್ಲಿದ್ದು, ಶನಿವಾರ ಸಂಜೆ 4 ಗಂಟೆಯ ವೇಳೆಗೆ ಮನೆ ಸಮೀಪದ ಸುಮಾರು 70 ಅಡಿ ಆಳದ ಬಾವಿಗೆ ಬಿದ್ದ ಕೋಳಿ ಮರಿಯನ್ನು ರಕ್ಷಿಸಲು ಮುಂದಾಗಿದ್ದು ಈ ವೇಳೆ ಈ ಅವಘಡ ಸಂಭವಿಸಿದೆ.
ಕೋಳಿ ಮರಿಯನ್ನು ಮೇಲಕ್ಕೆತ್ತಲು ಬುಟ್ಟಿಗೆ ಹಗ್ಗ ಕಟ್ಟಿ ಬುಟ್ಟಿಯನ್ನು ಬಾವಿಗೆ ಇಳಿಸುತ್ತಿದ್ದ ಸಂದರ್ಭ ಬಾವಿಯ ಕಟ್ಟೆ ಕುಸಿದು ವಸಂತ ಅವರು ಬಾವಿಗೆ ಬಿದ್ದಿದ್ದು, ತÀಕ್ಷಣ ಸ್ಥಳೀಯರು ಹರಸಾಸಪಟ್ಟು ವಸಂತ ಅವರನ್ನು ಮೇಲಕ್ಕೆತ್ತಿದರಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
0 comments:
Post a Comment