ಉಡುಪಿ, ಮಾರ್ಚ್ 21, 2022 (ಕರಾವಳಿ ಟೈಮ್ಸ್) : ಜಿಲ್ಲೆಯ ಕಾಪು ತಾಲೂಕಿನ ಫಕೀರ್ಣಕಟ್ಟೆಯ ಗುಜರಿ ದಾಸ್ತಾನು ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ ಸ್ಫೋಟಗೊಂಡು ಉಂಟಾದ ಅಗ್ನಿ ಅವಘಡದಲ್ಲಿ ಮೂರು ಮಂದಿ ಸಜೀವ ದಹನಗೊಂಡು ಮತ್ತಿಬ್ಬರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಗುಜರಿ ಅಂಗಡಿ ಪಾಲುದಾರ ಚಂದ್ರನಗರ ನಿವಾಸಿ ರಜಬ್ ಸಹಿತ ರಝಾಕ್ ಮಲ್ಲಾರ್ ಹಾಗೂ ನಿಯಾಝ್ ಮೃತಪಟ್ಟವರಾಗಿದ್ದಾರೆ.
ಅಂಗಡಿಯ ಇನ್ನೋರ್ವ ಪಾಲುದಾರ ಹಸನಬ್ಬ ಸಹಿತ ಇಬ್ಬರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಗಡಿಯಲ್ಲಿ ಗುಜರಿಗೆ ಬಂದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕಾಪು ಪೆÇೀಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
0 comments:
Post a Comment