ಮಂಗಳೂರು, ಮಾರ್ಚ್ 18, 2022 (ಕರಾವಳಿ ಟೈಮ್ಸ್) : ಶ್ರೀನಿವಾಸ ವಿಶ್ವವಿದ್ಯಾನಿಲಯ-ಇನ್‍ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್, ಏವಿಯೇಷನ್ ಸ್ಟಡೀಸ್, ಶಿP್ಷÀಣ ಮತ್ತು ಇಂಟೀರಿಯರ್ ಡಿಸೈನ್ ವಿಭಾಗ ವಿದ್ಯಾರ್ಥಿಗಳು ಜಂಟಿಯಾಗಿ ಮಾರ್ಚ್ 17 ರಂದು ಪಾಂಡೇಶ್ವರದ ಸಿಟಿ ಕ್ಯಾಂಪಸ್‍ನಲ್ಲಿ ಹೋಳಿ, ರಂಗ್-2022 ಕಾರ್ಯಕ್ರಮ ಆಚರಿಸಿದರು. ಮಳೆ ನೃತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳು, ಡಿಜೆ ಹಾಡುಗಳು ಮತ್ತು ಬಣ್ಣಗಳ ರೋಮಾಂಚಕ ಆಟದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಡಾ ಸಿಎಎ ರಾಘವೇಂದ್ರ ರಾವ್ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದಲ್ಲಿ ಉತ್ಸವ ಆಚರಿಸಲಾಯಿತು. ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಮತ್ತು ಎ ಶಾಮರಾವ್ ಪ್ರತಿಷ್ಠಾನದ ಅಧ್ಯP್ಷÀ, ಶ್ರೀನಿವಾಸ್ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ್ ಸಮೂಹ ಸಂಸ್ಥೆಗಳ ಉಪಾಧ್ಯP್ಷÀ ಡಾ ಎ ಶ್ರೀನಿವಾಸ್ ರಾವ್ ಅಧ್ಯP್ಷÀತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಿ ಶ್ರೀಧರ್ ಮಾತನಾಡಿ, ಕೋವಿಡ್ ಕಾರಣದಿಂದಾಗಿ 2 ವರ್ಷಗಳ ನಂತರ ವಿದ್ಯಾರ್ಥಿಗಳಿಗೆ ಇಂತಹ ಸಂಭ್ರಮ ಆಚರಣೆಗೆ ಅವಕಾಶ ದೊರೆತಿದೆ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ಮತ್ತು ಸಮೃದ್ಧವಾಗಲಿ ಎಂದು ಹಾರೈಸಿದರು.
ಶ್ರೀನಿವಾಸ್ ವಿಶ್ವವಿದ್ಯಾಲಯ ಉಪಕುಲಪತಿ ಡಾ ಪಿ ಎಸï ಐತಾಳ್, ಡೆವಲಪ್‍ಮೆಂಟï ರಿಜಿಸ್ಟ್ರಾರ್ ಡಾ ಅಜಯ್ ಕೆ ಜೆ, ಡೀನ್‍ಗಳು, ಬೋಧಕ ಮತ್ತು ಬೋಧಕೇತರ ಅಧ್ಯಾಪಕರು, ಇನ್‍ಸ್ಟಿಟ್ಯೂಟï ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್, ಏವಿಯೇಷನ್ ಸ್ಟಡೀಸ್, ಶಿP್ಷÀಣ ಮತ್ತು ಒಳಾಂಗಣ ವಿನ್ಯಾಸದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ ಪಿ ಎಸï ಐತಾಳ್ ಸ್ವಾಗತಿಸಿ, ಶಿP್ಷÀಣ ಸಂಸ್ಥೆಯ ಡೀನ್ ಡಾ ಜಯಶ್ರೀ ವಂದಿಸಿದರು. ವಿಮಾನಯಾನ ಅಧ್ಯಯನ ಸಂಸ್ಥೆಯ ಉಪನ್ಯಾಸಕಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment