ಬಂಟ್ವಾಳ ಮಾರ್ಚ್ 16, 2022 (ಕರಾವಳಿ ಟೈಮ್ಸ್) : ಹಿಜಾಬ್ ಧಾರಣೆ ಕುರಿತು ಕರ್ನಾಟಕ ಹೈಕೋರ್ಟ್ ಮಂಗಳವಾರ ನೀಡಿರುವ ತೀರ್ಪು ಸಂವಿಧಾನ ವಿರೋಧಿಯಾಗಿದ್ದು, ಈ ಬಗ್ಗೆ ಮುಸ್ಲಿಂ ಸಮುದಾಯ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಾಲೂಕಿನ ವಿವಿಧ ಸಂಘಟನೆಗಳು, ಮಸೀದಿ ಆಡಳಿತ ಮಂಡಳಿಗಳು ಗುರುವಾರ ಸ್ವಯಂಪ್ರೇರಿತ ಬಂದ್ ಆಚರಿಸಿ ಪ್ರತಿಭಟನೆ ನಡೆಸುವಂತೆ ಕರೆ ನೀಡಿದೆ.
ಇದೊಂದು ಧಾರ್ಮಿಕ ಹಕ್ಕು ಹಾಗೂ ಸಾಂವಿಧಾನಿಕ ಹಕ್ಕಿಗೆ ಸಂಬಂಧಪಟ್ಟ ವಿಚಾರವಾಗಿರುವುದರಿಂದ ಪ್ರತಿರೋಧ ವ್ಯಕ್ತಪಡಿಸುವ ನಿಟ್ಟಿನಲ್ಲಿ ಈ ಸ್ವಯಂ ಪ್ರೇರಿತ ಬಂದ್ ಆಚರಣೆ ನಡೆಯಲಿದ್ದು, ಯಾವುದೇ ಕಾರಣಕ್ಕೂ ಬಲವಂತದ ಬಂದ್ ನಡೆಸುವಂತೆ ಒತ್ತಾಯಿಸುವಂತಿಲ್ಲ ಎಂದು ಕೂಡಾ ಬಂದಿಗೆ ಕರೆ ನೀಡಿರುವ ಸಂಘಟನೆಗಳು ಹಾಗೂ ಮಸೀದಿ ಆಡಳಿತ ಸಮಿತಿಗಳು ಮನವಿ ಮಾಡಿಕೊಂಡಿದೆ.
ಮಿತ್ತಬೈಲು ಕೇಂದ್ರ ಜುಮಾ ಮಸೀದಿ, ಫರಂಗಿಪೇಟೆ, ನಂದಾವರ, ಬಂಟ್ವಾಳ, ವಿಟ್ಲ ಮೊದಲಾದ ತಾಲೂಕಿನ ಪ್ರಮುಖ ಕೇಂದ್ರ ಮಸೀದಿ ಆಡಳಿತ ಸಮಿತಿಗಳು ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಪ್ರಕಟಣೆ ನೀಡಿ ಸರ್ವ ಮುಸ್ಲಿಮರು ಹಾಗೂ ದೇಶದ ಸಂವಿಧಾನ ಗೌರವಿಸುವ ಪ್ರತಿಯೊಬ್ಬರು ಬೆಂಬಲ ನೀಡುವಂತೆ ಕೋರಿವೆ.
0 comments:
Post a Comment