ಕಂದಾಯ ದಾಖಲೆ ಮನೆ ಬಾಗಿಲಿಗೆ : ಕಾರ್ಯಕ್ರಮಕ್ಕೆ ಬಂಟ್ವಾಳದಲ್ಲಿ ಸಂಸದ ನಳಿನ್ ಚಾಲನೆ - Karavali Times ಕಂದಾಯ ದಾಖಲೆ ಮನೆ ಬಾಗಿಲಿಗೆ : ಕಾರ್ಯಕ್ರಮಕ್ಕೆ ಬಂಟ್ವಾಳದಲ್ಲಿ ಸಂಸದ ನಳಿನ್ ಚಾಲನೆ - Karavali Times

728x90

12 March 2022

ಕಂದಾಯ ದಾಖಲೆ ಮನೆ ಬಾಗಿಲಿಗೆ : ಕಾರ್ಯಕ್ರಮಕ್ಕೆ ಬಂಟ್ವಾಳದಲ್ಲಿ ಸಂಸದ ನಳಿನ್ ಚಾಲನೆ

ಬಂಟ್ವಾಳ ಮಾರ್ಚ್ 12, 2022 (ಕರಾವಳಿ ಟೈಮ್ಸ್) : ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರಕಾರ ಕೃಷಿಕರ ದಾಖಲೆಗಳನ್ನು ಮನೆ ಮನೆಗೆ ತಲುಪಿಸುವ ಯೋಜನೆ ಜಾರಿಗೊಳಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಇದರಿಂದ ರಾಜ್ಯದ ಲಕ್ಷಾಂತರ ರೈತರಿಗೆ ಪ್ರಯೋಜನವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಮನೆಬಾಗಿಲಿಗೆ ಕಂದಾಯ ದಾಖಲೆಗಳನ್ನು ಒದಗಿಸುವ ಕಂದಾಯ ಸಚಿವ ಆರ್ ಅಶೋಕ್ ಅವರ ಮಹತ್ವಾಕಾಂಕ್ಷೆಯ ಯೋಜನೆಗೆ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು ಇದು ರೈತರ ಕಣ್ಣೀರು ಹಾಗೂ ಬೆವರನ್ನು ಒರೆಸುವ ಕಾರ್ಯಕ್ರಮವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿದೆ. ಮುಂದಿನ 3-4 ತಿಂಗಳೊಳಗಾಗಿ ಈ ಕಾರ್ಯಕ್ರಮ ಸಂಪೂರ್ಣ ಜಾರಿಯಾಗಲಿದೆ ಎಂದರು. 

ಅಮ್ಮುಂಜೆ ನಿವಾಸಿ ನೋಣಯ್ಯ ಮೂಲ್ಯ ಅವರ ಮನೆಗೆ ಆರ್ ಟಿ ಸಿ, ಜಾತಿ-ಆದಾಯ ಸರ್ಟಿಫಿಕೇಟ್ ಹಾಗೂ ನಕ್ಷೆ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್, ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್, ಗ್ರಾ ಪಂ ಅಧ್ಯಕ್ಷ ವಾಮನ್ ಆಚಾರ್ಯ, ಉಪಾಧ್ಯಕ್ಷೆ ಪ್ರಮೀಳಾ, ಸದಸ್ಯರಾದ ರವಿ ಸುವರ್ಣ, ಕಾರ್ತಿಕ್ ಬಲ್ಲಾಳ್, ಲೀಲಾವತಿ, ಲಕ್ಷ್ಮಿ, ರೊನಾಲ್ಡ್ ಡಿ’ಸೋಜ, ಭಾಗೀರಥಿ, ರಾಧಾಕೃಷ್ಣ ತಂತ್ರಿ, ತಾಲೂಕು ಕಚೇರಿ ಶಿರಸ್ತೇದಾರ್ ನರೇಂದ್ರನಾಥ ಮಿತ್ತೂರು, ಕಂದಾಯ ನಿರೀಕ್ಷಕ ವಿಜಯ್, ಗ್ರಾಮಕರಣಿಕ ಪ್ರಶಾಂತ್, ಗ್ರಾಮಸಹಾಯಕ ರೂಪೇಶ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕಂದಾಯ ದಾಖಲೆ ಮನೆ ಬಾಗಿಲಿಗೆ : ಕಾರ್ಯಕ್ರಮಕ್ಕೆ ಬಂಟ್ವಾಳದಲ್ಲಿ ಸಂಸದ ನಳಿನ್ ಚಾಲನೆ Rating: 5 Reviewed By: karavali Times
Scroll to Top