ಬೆಳ್ತಂಗಡಿ, ಮಾರ್ಚ್ 19, 2022 (ಕರಾವಳಿ ಟೈಮ್ಸ್) : ಯಾವ ಕೊಲೆಗಳನ್ನೂ ಪೆÇ್ರೀತ್ಸಾಹಿಸಬಾರದು, ಖಂಡಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇತ್ತೀಚೆಗೆ ಕೊಲೆಯಾದ ಬೆಳ್ತಂಗಡಿಯ ದಲಿತ ಯುವಕ ದಿನೇಶ್ ಕನ್ಯಾಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರವಾಗಿ ಒಂದು ಲಕ್ಷ ರೂಪಾಯಿಗಳನ್ನು ನಗದು ರೂಪದಲ್ಲೇ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿವಮೊಗ್ಗದ ಹರ್ಷಾ ಕುಟುಂಬಕ್ಕೆ ಸರಕಾರ 25 ಲಕ್ಷ ರೂಪಾಯಿ ನೆರವು ಕೊಟ್ಟಿದೆ. ಆದರೆ ಇವನು ದಲಿತ ಸಮುದಾಯಕ್ಕೆ ಸೇರಿದ ಯುವಕ, ಇವನಿಗೆ 25 ಲಕ್ಷ ಕೊಡಬೇಕಿತ್ತು. ನರಗುಂದಲ್ಲೂ ಒಬ್ಬ ಮುಸ್ಲಿಂ ಹುಡುಗನ ಕೊಲೆ ಆಗಿತ್ತು. ಇಲ್ಲಿ ಕೊಲೆ ಮಾಡಿದ್ದು ಭಜರಂಗದಳದವನು, ಅಲ್ಲಿ ಮಾಡಿದ್ದು ರಾಮ ಸೇನೆಯವರು. ಈ ವಿಚಾರದಲ್ಲಿ ಸರಕಾರ ತಾರತಮ್ಯ ನೀತಿ ಅನುಸರಿಸಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ದಿನೇಶ್ ಕುಟುಂಬಕ್ಕೆ 25 ಲಕ್ಷ ರೂಪಾಯಿ ನೀಡುವಂತೆ ಅಸೆಂಬ್ಲಿಯಲ್ಲಿ ಒತ್ತಾಯಿಸ್ತೇನೆ. ನರಗುಂದದ ಸಮೀರ್‍ಗೂ 25 ಲಕ್ಷ ಪರಿಹಾರ ಕೊಡಬೇಕು. ಜೊತೆಗೆ ದಿನೇಶ್ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಆಗಬೇಕು. ಇದೆಲ್ಲಾ ಆಗೋಕೆ ಸರಕಾರ ಬಿಗು ಕ್ರಮ ತೆಗೋತಿಲ್ಲ. ಮುಖ್ಯಮಂತ್ರಿ ಕ್ರಿಯೆಗೆ ಪ್ರತಿಕ್ರಿಯೆ ಅಂತಾರೆ, ಹೋಂ ಮಿನಿಸ್ಟರ್ ಇನ್ನೊಂದು ರೀತಿ. ಅತ್ತ ಈಶ್ವರಪ್ಪ ಇನ್ನೊಂದು ಹೇಳೋದ್ರಿಂದ ಜನ ಕಾನೂನು ಕೈಗೆ ತೆಗೋತಾರೆ. ಯಾವ ಕೊಲೆಗಳನ್ನೂ ಪೆÇ್ರೀತ್ಸಾಹಿಸಬಾರದು, ಖಂಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ಹೇಳಿದರು.
ಈ ಸಂದರ್ಭ ಮಾಜಿ ಶಾಸಕ ವಸಂತ ಬಂಗೇರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment