ಬೀದರ್, ಮಾರ್ಚ್ 19, 2022 (ಕರಾವಳಿ ಟೈಮ್ಸ್) : ತುಮಕೂರು ಜಿಲ್ಲೆಯ ಪಾವಗಡ ಭೀಕರ ಬಸ್ ಅಪಘಾತದ ಸುದ್ದಿಯ ನಡುವೆ ಗಡಿಜಿಲ್ಲೆ ಬೀದರ್‍ನಲ್ಲೂ ಖಾಸಗಿ ಬಸ್ಸು ಪಲ್ಟಿಯಾಗಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಬೆಂಗಳೂರಿನಿಂದ ಬೀದರಿಗೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಬೈಕ್ ಸವಾರ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ಮೀರಿ ಬಸ್ ಪಲ್ಪಿಯಾಗಿದೆ ಎನ್ನಲಾಗಿದ್ದು, ಸುಮಾರು 6 ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಯಾವುದೇ ರೀತಿಯ ಪ್ರಾಣಾಪಾಯವಾದ ಬಗ್ಗೆ ವರದಿಯಾಗಿಲ್ಲ.
ಗಾಯಾಳುಗಳನ್ನು ಸ್ಥಳೀಯರು ಬ್ರೀಮ್ಸ್ ಅಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಜನವಾಡ ಪೆÇಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
0 comments:
Post a Comment