ಸರಕಾರಿ ಸೇವೆಗೆ ಅಧಿಕಾರಿಗಳು ಸತಾಯಿಸಿದರೆ ತಕ್ಷಣ ಗಮನಕ್ಕೆ ತನ್ನಿ : ಸಾರ್ವಜನಿಕರಿಗೆ ಬಂಟ್ವಾಳ ಶಾಸಕರ ಕರೆ - Karavali Times ಸರಕಾರಿ ಸೇವೆಗೆ ಅಧಿಕಾರಿಗಳು ಸತಾಯಿಸಿದರೆ ತಕ್ಷಣ ಗಮನಕ್ಕೆ ತನ್ನಿ : ಸಾರ್ವಜನಿಕರಿಗೆ ಬಂಟ್ವಾಳ ಶಾಸಕರ ಕರೆ - Karavali Times

728x90

19 March 2022

ಸರಕಾರಿ ಸೇವೆಗೆ ಅಧಿಕಾರಿಗಳು ಸತಾಯಿಸಿದರೆ ತಕ್ಷಣ ಗಮನಕ್ಕೆ ತನ್ನಿ : ಸಾರ್ವಜನಿಕರಿಗೆ ಬಂಟ್ವಾಳ ಶಾಸಕರ ಕರೆ

ಬಂಟ್ವಾಳ, ಮಾರ್ಚ್ 19, 2022 (ಕರಾವಳಿ ಟೈಮ್ಸ್) : ಸಮಸ್ಯೆಗಳನ್ನು ಹೇಳಿಕೊಂಡು ಬಂದ ಜನರ ಕೆಲಸಕ್ಕಾಗಿ ಅಲೆದಾಡುವಂತೆ ಮಾಡದೆ ಶೀಘ್ರ ಕೆಲಸ ಮಾಡಿಕೊಡುವಂತೆ ಅಧಿಕಾರಿಗಳಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ತಾಕೀತು ಮಾಡಿದರು. 

ತಾಲೂಕು ತಹಶೀಲ್ದಾರ್ ನೇತೃತ್ವದಲ್ಲಿ ಬಡಗಬೆಳ್ಳೂರು ಗ್ರಾ ಪಂ ಸಭಾಂಗಣದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಧಿಕಾರಿಗಳು ಕೆಲಸ ಮಾಡುವಲ್ಲಿ ವಿಳಂಬ ಮಾಡಿದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ ಎಂದವರು ಜನತೆಗೆ ಅಭಯ ನೀಡಿದರು. 

ಬಡಗಬೆಳ್ಳೂರು ಗ್ರಾಮದಲ್ಲಿ 50ಕ್ಕಿಂತಲೂ ಹೆಚ್ಚು ಮನೆಯವರಿಗೆ ತಾಂತ್ರಿಕ ತೊಂದರೆಯಿಂದ 94ಸಿ ಪತ್ರ ಸಿಗದೆ ವಂಚಿತರಾಗಿದ್ದು, ಈ ಬಗ್ಗೆ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಇದೇ ವೇಳೆ ಭರವಸೆ ನೀಡಿದರು. ಕಳೆದೆರಡು ವರ್ಷಗಳಿಂದ ಅಧಿಕಾರಿಗಳ ಬೇಜಾಬ್ದಾರಿ ಕಾರಣದಿಂದ ಕಂದಾಯ ಇಲಾಖೆಯಿಂದ ಕೆಲಸಗಳು ಆಗದೆ ಬಾಕಿ ಉಳಿದಿದೆ. ಇಷ್ಟು ಸಮಯ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರಲ್ಲದೆ ಶೀಘ್ರವಾಗಿ ಜನರ ಕೆಲಸವನ್ನು ಮಾಡಿಕೊಡುವಂತೆ ಸೂಚಿಸಿದರು. 

ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್ ಮಾತನಾಡಿ, ತಾಲೂಕಿನ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಕಾರ್ಯಕ್ರಮ ಇದಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಜನರು ಸಮಸ್ಯೆ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. 

ಈ ಮಧ್ಯೆ ಕಂದಾಯ ಇಲಾಖೆಯ ಹಲವು ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ವಿನೂತನ ಕಾರ್ಯಕ್ರಮವನ್ನು ರಾಜ್ಯ ಸರಕಾರ ಜಾರಿ ಮಾಡಿದೆ. ತಾಲೂಕಿನ ಐದು ಕಡೆಗಳಲ್ಲಿ ಕಾರ್ಯಕ್ರಮ ಮಾಡಲಾಗಿತ್ತು, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಮನ್ವಯತೆಯಿಂದ ಅನೇಕ ಸಮಸ್ಯೆಗಳು ಬಗೆಹರಿಸಲು ಸಹಾಯವಾಗಿದೆ ಎಂದು ತಹಶೀಲ್ದಾರ್ ಹೇಳಿದರು.

ಗ್ರಾ ಪಂ ಅಧ್ಯಕ್ಷ ಪ್ರಕಾಶ್ ಅಳ್ವ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಮತಾ, ತಾಲೂಕು ಸಹಾಯಕ ನಿರ್ದೇಶಕ ಹರೀಶ್, ಗ್ರೇಡ್-2 ತಹಶೀಲ್ದಾರ್ ಕವಿತಾ, ಪಂಚಾಯತ್ ಸದಸ್ಯರಾದ ಉಮೇಶ್ ಪರಿಮೊಗರು, ವಿಜಯ ಪುರುಷೋತ್ತಮ ಪೂಜಾರಿ, ಚಂದ್ರಹಾಸ ಕಾಗುಡ್ಡೆ, ರಘವೀರ್ ಆಚಾರ್ಯ ಗರ್ಗಲ್, ಚೈತ್ರಾ ನವೀನ್ ಪೂಜಾರಿ, ಗೀತಾ ಗಣೇಶ್, ಉಪತಹಶೀಲ್ದಾರ್‍ಗಳಾದ ನರೇಂದ್ರನಾಥ್ ಭಟ್, ನವೀನ್ ಬೆಂಜನಪದವು, ಪಾಣೆಮಂಗಳೂರು ಕಂದಾಯ ನಿರೀಕ್ಷಕ ವಿಜಯ್ ಆರ್, ಗ್ರಾಮ ಕರಣಿಕ ನಾಗರಾಜ್, ಗ್ರಾ ಪಂ ಪಿಡಿಒ ಶಿವಲಾಲ್ ಚೌಹಾನ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಮತ್ತು ಕಂದಾಯ ಇಲಾಖಾ ಸಿಬ್ಬಂದಿಗಳು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಸರಕಾರಿ ಸೇವೆಗೆ ಅಧಿಕಾರಿಗಳು ಸತಾಯಿಸಿದರೆ ತಕ್ಷಣ ಗಮನಕ್ಕೆ ತನ್ನಿ : ಸಾರ್ವಜನಿಕರಿಗೆ ಬಂಟ್ವಾಳ ಶಾಸಕರ ಕರೆ Rating: 5 Reviewed By: karavali Times
Scroll to Top