ಬಂಟ್ವಾಳ, ಮಾರ್ಚ್ 05, 2022 (ಕರಾವಳಿ ಟೈಮ್ಸ್) : ಭೂಯಾ ಸ್ಪೋಟ್ರ್ಸ್ ಕ್ಲಬ್ (ರಿ) ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಪ್ರತಿ ವರ್ಷ ನಡೆಸಲ್ಪಡುವ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಒಳಗೊಂಡ ಆರು ತಂಡಗಳ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ 6ನೇ ಆವೃತ್ತಿಯ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಟೂರ್ನಮೆಂಟಿಗೆ ಶನಿವಾರ (ಮಾರ್ಚ್ 5) ಆಲಡ್ಕ ಮೈದಾನದಲ್ಲಿ ಚಾಲನೆ ನೀಡಲಾಯಿತು.
ಸ್ಥಳೀಯ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಉದ್ಯಮಿಗಳಾದ ಅಬ್ದುಲ್ ರಹಿಮಾನ್ ಮೋನಾಕ ಮೆಲ್ಕಾರ್, ಅಬ್ದುಲ್ ಹಕೀಂ ಉಲ್ಲಾಸ್, ಅಬ್ದುಲ್ ಅಝೀಝ್ ಬಂಗ್ಲೆಗುಡ್ಡೆ, ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಅಬ್ದುಲ್ ಖಾದರ್ ಬಂಗ್ಲೆಗುಡ್ಡೆ, ಸಂಘಟಕರಾದ ಶಫೀಕ್ ಯು, ಅಬ್ದುಲ್ ಖಾದರ್ ಚಪ್ಪು ಮೊದಲಾದವರು ಭಾಗವಹಿಸಿದ್ದರು.
ಮೊದಲ ದಿನದಾಟದ ಅಂತ್ಯಕ್ಕೆ ಮುಸ್ತಫಾ ಪಿ ಜೆ ಮಾಲಕತ್ವದ ನ್ಯೂಸ್ಟಾರ್ ತಂಡ 3 ಪಂದ್ಯಗಳನ್ನು ಆಡಿ 2 ಜಯ ಹಾಗೂ ಒಂದು ಟೈ ಒಳಗೊಂಡಂತೆ 5 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಉಳಿದಂತೆ ರಿಯಾಝ್ ಮಾಲಕತ್ವದ ಪ್ಲೇಬಾಯ್ಸ್ ತಂಡ 3 ಪಂದ್ಯಗಳನ್ನು ಆಡಿ 2 ಜಯ, 1 ಸೋಲಿನೊಂದಿಗೆ 4 ಅಂಕಗಳು, ಅರ್ಮಾನ್ ಅಜ್ಜು ಮಾಲಕತ್ವದ ಬೀಯಿಂಗ್ ಭೂಯಾ ತಂಡ 3 ಪಂದ್ಯಗಳನ್ನು ಆಡಿದ್ದು, 1 ಜಯ, 1 ಸೋಲು ಹಾಗೂ 1 ಟೈ ಮೂಲಕ 3 ಅಂಕಗಳು, ಅಬ್ದುಲ್ ರಹಿಮಾನ್ ಮಾಲಕತ್ವದ ಎಸ್.ಎಸ್. ವಾರಿಯರ್ಸ್ ತಂಡ 3 ಪಂದ್ಯಗಳನ್ನು ಆಡಿ 2 ಸೋಲು ಹಾಗೂ 1 ಜಯದೊಂದಿಗೆ 2 ಅಂಕಗಳು, ಖಲಂದರ್ ಮಾಲಕತ್ವದ ಎ ಟು ಝಡ್ ತಂಡ 2 ಪಂದ್ಯಗಳನ್ನು ಆಡಿದ್ದು, 1 ಸೋಲು ಹಾಗೂ 1 ಟೈ ಮೂಲಕ 1 ಅಂಕ, ರಿಝ್ವಾನ್ ಪಿಜೆ ಮಾಲಕತ್ವದ ಪಿ ಜೆ ಸ್ಟಾರ್ಸ್ ತಂಡ 2 ಪಂದ್ಯಗಳನ್ನು ಆಡಿ, 1 ಟೈ ಹಾಗೂ 1 ಸೋಲಿನೊಂದಿಗೆ 1 ಅಂಕಗಳನ್ನು ಸಂಪಾದಿಸಿದ್ದು, 2ನೇ ದಿನವಾದ ಭಾನುವಾರ (ಮಾ 6) ಮತ್ತೆ ಲೀಗ್ ಹಂತದ ಉಳಿದ ಪಂದ್ಯಗಳನ್ನು ಆಡಲಿದೆ. ಬಳಿಕ ಮಹತ್ವದ ಫಲಿತಾಂಶ ನಿರ್ಣಾಯ ಪಂದ್ಯಾಟಗಳು ಮಾರ್ಚ್ 13 ರಂದು ಭಾನುವಾರ ನಡೆಯಲಿದೆ. ಕೂ
ಕೂಟದಲ್ಲಿ ತೀರ್ಪುಗಾರರಾಗಿ ಫಾರೂಕ್ ನಂದಾವರ, ಅತಾವುಲ್ಲಾ ಗೂಡಿನಬಳಿ, ಸಾಬಿತ್ ಗೂಡಿನಬಳಿ ಕಾರ್ಯನಿರ್ವಹಿಸಿದರೆ, ಸ್ಕೋರ್ ಬೋರ್ಡ್ ವಿಭಾಗದಲ್ಲಿ ಸಲಾಲ್ ಗೂಡಿನಬಳಿ ಅವರು ಕಾರ್ಯನಿರ್ವಹಿಸಿದರು.
0 comments:
Post a Comment