ಎಪಿಎಲ್ ಸೀಸನ್-6 : 2ನೇ ದಿನವೂ ಅಗ್ರಸ್ಥಾನ ಕಾಯ್ದುಕೊಂಡ ನ್ಯೂಸ್ಟಾರ್ ತಂಡ : ಮಾ 13 ರಂದು ಪ್ರಶಸ್ತಿ ನಿರ್ಣಾಯಕ ಹಂತದ ಹೋರಾಟ ಮುಂದುವರಿಕೆ - Karavali Times ಎಪಿಎಲ್ ಸೀಸನ್-6 : 2ನೇ ದಿನವೂ ಅಗ್ರಸ್ಥಾನ ಕಾಯ್ದುಕೊಂಡ ನ್ಯೂಸ್ಟಾರ್ ತಂಡ : ಮಾ 13 ರಂದು ಪ್ರಶಸ್ತಿ ನಿರ್ಣಾಯಕ ಹಂತದ ಹೋರಾಟ ಮುಂದುವರಿಕೆ - Karavali Times

728x90

9 March 2022

ಎಪಿಎಲ್ ಸೀಸನ್-6 : 2ನೇ ದಿನವೂ ಅಗ್ರಸ್ಥಾನ ಕಾಯ್ದುಕೊಂಡ ನ್ಯೂಸ್ಟಾರ್ ತಂಡ : ಮಾ 13 ರಂದು ಪ್ರಶಸ್ತಿ ನಿರ್ಣಾಯಕ ಹಂತದ ಹೋರಾಟ ಮುಂದುವರಿಕೆ

ಬಂಟ್ವಾಳ, ಮಾರ್ಚ್ 05, 2022 (ಕರಾವಳಿ ಟೈಮ್ಸ್) : ಭೂಯಾ ಸ್ಪೋಟ್ರ್ಸ್ ಕ್ಲಬ್ (ರಿ) ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಪ್ರತಿ ವರ್ಷ ನಡೆಸಲ್ಪಡುವ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಒಳಗೊಂಡ ಆರು ತಂಡಗಳ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ 6ನೇ ಆವೃತ್ತಿಯ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಟೂರ್ನಮೆಂಟಿನ 2ನೇ ದಿನವೂ ಮುಸ್ತಫಾ ಪಿ ಜೆ ಮಾಲಕತ್ವದ ನ್ಯೂಸ್ಟಾರ್ ತಂಡ 5 ಪಂದ್ಯಗಳನ್ನು ಆಡಿ 3 ಜಯ, ಒಂದು ಸೋಲು ಹಾಗೂ ಒಂದು ಟೈ ಒಳಗೊಂಡಂತೆ 7 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. 

ಸ್ಥಳೀಯ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಉದ್ಯಮಿಗಳಾದ ಅಬ್ದುಲ್ ರಹಿಮಾನ್ ಮೋನಾಕ ಮೆಲ್ಕಾರ್, ಅಬ್ದುಲ್ ಮಜೀದ್ ನಾಝ್, ಅಬ್ದುಲ್ ಹಕೀಂ ಉಲ್ಲಾಸ್, ಅಬ್ದುಲ್ ಅಝೀಝ್ ಬಂಗ್ಲೆಗುಡ್ಡೆ, ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಖಲಂದರ್ ಅಮ್ಟೂರು ಮೊದಲಾದವರು ಭಾಗವಹಿಸಿದ್ದರು. ಭೂಯಾ ಸ್ಪೋಟ್ರ್ಸ್ ಕ್ಲಬ್ ಪದಾಧಿಕಾರಿಗಳಾದ ಶಫೀಕ್ ಯು, ಅಬ್ದುಲ್ ಖಾದರ್ ಚಪ್ಪು, ಅಶ್ರಫ್ ಯು., ಶರೀಫ್ ಭೂಯಾ, ಹಬೀಬ್ ಬಿ. ಮೊದಲಾದವರು ಉಪಸ್ಥಿತರಿದ್ದರು.

2ನೇ ದಿನದಾಟದ ಅಂತ್ಯಕ್ಕೆ ಉಳಿದ ತಂಡಗಳಾದ ರಿಯಾಝ್ ಮಾಲಕತ್ವದ ಪ್ಲೇಬಾಯ್ಸ್ ತಂಡ 4 ಪಂದ್ಯಗಳನ್ನು ಆಡಿ 3 ಜಯ, 1 ಸೋಲಿನೊಂದಿಗೆ 6 ಅಂಕಗಳು, ಅರ್ಮಾನ್ ಅಜ್ಜು ಮಾಲಕತ್ವದ ಬೀಯಿಂಗ್ ಭೂಯಾ ತಂಡ 4 ಪಂದ್ಯಗಳನ್ನು ಆಡಿದ್ದು, 2 ಜಯ, 1 ಸೋಲು ಹಾಗೂ 1 ಟೈ ಮೂಲಕ 5 ಅಂಕಗಳು, ಅಬ್ದುಲ್ ರಹಿಮಾನ್ ಮಾಲಕತ್ವದ ಎಸ್.ಎಸ್. ವಾರಿಯರ್ಸ್ ತಂಡ 4 ಪಂದ್ಯಗಳನ್ನು ಆಡಿ 2 ಸೋಲು ಹಾಗೂ 2 ಜಯದೊಂದಿಗೆ 4 ಅಂಕಗಳು, ಖಲಂದರ್ ಮಾಲಕತ್ವದ ಎ ಟು ಝಡ್ ತಂಡ 5 ಪಂದ್ಯಗಳನ್ನು ಆಡಿದ್ದು, 3 ಸೋಲು ಹಾಗೂ 2 ಟೈ ಮೂಲಕ 2 ಅಂಕ, ರಿಝ್ವಾನ್ ಪಿಜೆ ಮಾಲಕತ್ವದ ಪಿ ಜೆ ಸ್ಟಾರ್ಸ್ ತಂಡ 4 ಪಂದ್ಯಗಳನ್ನು ಆಡಿ, 2 ಟೈ ಹಾಗೂ 2 ಸೋಲಿನೊಂದಿಗೆ 2 ಅಂಕಗಳನ್ನು ಸಂಪಾದಿಸಿದೆ. 

ಲೀಗ್ ಹಂತದಲ್ಲಿ ಕೊನೆಯ 2 ಪಂದ್ಯಾಟಗಳು ಮಾತ್ರ ಬಾಕಿ ಉಳಿದಿದ್ದು, ಮಾರ್ಚ್ 13 ರಂದು ಈ ಎರಡು ಪಂದ್ಯಾಟಗಳು ನಡೆಯಲಿದೆ. ಎಸ್.ಎಸ್. ವಾರಿಯರ್ಸ್ ಹಾಗೂ ಪಿ.ಜೆ. ಸ್ಟಾರ್ಸ್ ನಡುವೆ ಪ್ರಥಮ ಪಂದ್ಯಾಟ ನಡೆಯಲಿದ್ದು, ಬಳಿಕ ಲೀಗ್ ಹಂತದ ಕೊನೆಯ ಪಂದ್ಯಾಟ ಬೀಯಿಂಗ್ ಭೂಯಾ ಹಾಗೂ ಪ್ಲೇಬಾಯ್ಸ್ ತಂಡಗಳ ನಡುವೆ ನಡೆಯಲಿದೆ. ಬಳಿಕ ಪ್ರಶಸ್ತಿ ಸುತ್ತಿನ ಮಹತ್ವದ ಫಲಿತಾಂಶ ನಿರ್ಣಾಯಕ ಪಂದ್ಯಾಟಗಳು ನಡೆಯಲಿದೆ. ನಂತರ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. 

ಕೂಟದಲ್ಲಿ ತೀರ್ಪುಗಾರರಾಗಿ ಫಾರೂಕ್ ನಂದಾವರ, ಅತಾವುಲ್ಲಾ ಗೂಡಿನಬಳಿ, ಸಾಬಿತ್ ಗೂಡಿನಬಳಿ ಕಾರ್ಯನಿರ್ವಹಿಸದರೆ, ಸ್ಕೋರ್ ಬೋರ್ಡ್ ವಿಭಾಗದಲ್ಲಿ ಸಲಾಲ್ ಗೂಡಿನಬಳಿ ಅವರು ಕಾರ್ಯನಿರ್ವಹಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಎಪಿಎಲ್ ಸೀಸನ್-6 : 2ನೇ ದಿನವೂ ಅಗ್ರಸ್ಥಾನ ಕಾಯ್ದುಕೊಂಡ ನ್ಯೂಸ್ಟಾರ್ ತಂಡ : ಮಾ 13 ರಂದು ಪ್ರಶಸ್ತಿ ನಿರ್ಣಾಯಕ ಹಂತದ ಹೋರಾಟ ಮುಂದುವರಿಕೆ Rating: 5 Reviewed By: karavali Times
Scroll to Top