ಬಂಟ್ವಾಳ, ಫೆಬ್ರವರಿ 27, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಬೈಪಾಸ್ ಮಾಂಡೋವಿ ಶೋರೂಂ ಬಳಿ ಶನಿವಾರ ರಾತ್ರಿ ಸ್ಕೂಟರ್ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ನರಿಕೊಂಬು ಗ್ರಾಮದ ನೆಹರುನಗರ ನಿವಾಸಿ ಅಬ್ದುಲ್ ರಝಾಕ್ ಅವರ ಪುತ್ರ ಮುಹಮ್ಮದ್ ಶಾಕೀರ್ ಸಹಿತ ಸ್ಕೂಟರ್ ಸವಾರರಾದ ನಾಝೀಂ ಹಾಗೂ ಮೊಹಮ್ಮದ್ ರಾಝೀಕ್ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶನಿವಾರ ರಾತ್ರಿ ಸುಮಾರು 9.30ರ ವೇಳೆಗೆ ಶಾಕಿರ್ ಅವರು ಪಾಣೆಮಂಗಳೂರು ಮಾಂಡೊವಿ ಶೋ ರೂಂ ಸಮೀಪದ ಎಸ್ ಅರ್ ಬೇಕರಿಗೆ ಕೋಳಿ ಮಾಂಸ ಕೊಟ್ಟು ಅಲ್ಲಿಂದ ವಾಪಾಸು ಅಂಗಡಿಗೆ ಬರಲು ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಬಳಿ ತಲುಪಿದಾಗ ಹಿಂದಿನಿಂದ ಅಂದರೆ ಮೆಲ್ಕಾರ್ ಕಡೆಯಿಂದ ಧಾವಿಸಿ ಬಂದ ಸ್ಕೂಟರ್ ಚಾಲಕನ ಅಜಾಗರೂಕತೆಯಿಂದ ರಸ್ತೆ ಬದಿಯಲ್ಲಿದ್ದ ಶಾಕಿರ್ ಅವರಿಗೆ ಡಿಕ್ಕಿ ಹೊಡೆದಿರುತ್ತಾನೆ.
ಅಪಘಾತದ ತೀವ್ರತೆಗೆ ಪಾದಚಾರಿ ಶಾಕೀರ್ ಹಾಗೂ ಸ್ಕೂಟರ್ ಸವಾರ ನಾಝೀಮ್, ಸಹಸವಾರ ಮೊಹಮ್ಮದ್ ರಾಝೀಕ್ ಮೂರೂ ಮಂದಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಗಾಯಗೊಂಡ ಪಾದಚಾರಿ ಶಾಕೀರ್ ಹಾಗೂ ಸ್ಕೂಟರ್ ಸವಾರ ನಾಝೀಮ್ ಅವರನ್ನು ಮಂಗಳೂರು-ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ದಾಖಲಿಸಲಾಗಿದ್ದರೆ, ಸಹಸವಾರ ಮೊಹಮ್ಮದ್ ರಾಝೀಕ್ ಅವರನ್ನು ಒಳರೋಗಿಯಾಗಿ ದಾಖಲಿಸಲಾಗಿದೆ. ಸ್ಕೂಟರ್ ಸವಾರ ನಾಝೀಮ್ ಅವರ ಅಜಾರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪಾದಚಾರಿ ಶಾಕೀರ್ ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2022 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
0 comments:
Post a Comment