ಬಂಟ್ವಾಳ, ಫೆಬ್ರವರಿ 08, 2022 (ಕರಾವಳಿ ಟೈಮ್ಸ್) : ತಾಲೂಕಿನ ಕಂದಾಯ ಇಲಾಖೆಯಲ್ಲಿ ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿ ಪ್ರಸ್ತುತ ಪದೋನ್ನತಿ ಪಡೆದು ತಾಲೂಕಿನಿಂದ ವರ್ಗಾವಣೆಗೊಂಡ ಎಸ್ ಟಿ ಚಂದ್ರು, ಎ ಜಿ ಮಲ್ಲೇಶ್, ಜನಾರ್ದನ ಜೆ, ಮಂಜುನಾಥ್ ಕೆ ಎಚ್, ಮಹಮ್ಮದ್ ಕೆ ಆಸೀಫ್ ಅವರನ್ನು ಮಂಗಳವಾರ ಬಿ ಸಿ ರೋಡು ಮಿನಿ ವಿಧಾನಸೌಧ ಸಭಾಂಗಣದಲ್ಲಿ ಗೌರವಿಸಿ ಬೀಳ್ಕೊಡಲಾಯಿತು.
ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಗ್ರೇಡ್-2 ತಹಶೀಲ್ದಾರ್ ಕವಿತ, ಕೇಂದ್ರ ಸ್ಥಾನೀಯ ಶಿರಸ್ತೇದಾರ್ ನರೇಂದ್ರನಾಥ್ ಮಿತ್ತೂರು, ಉಪ ತಹಶೀಲ್ದಾರ್ ದಿವಾಕರ ಮುಗುಳಿಯ, ಕಂದಾಯ ನಿರೀಕ್ಷಕರಾದ ಆರ್ ವಿಜಯ್, ಸಂತೋಷ್ ಕುಮಾರ್, ಪ್ರಶಾಂತ್ ಶೆಟ್ಟಿ, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು.
ಗ್ರಾಮಲೆಕ್ಕಾಧಿಕಾರಿಗಳಾದ ನವ್ಯ ಎಸ್ ಎನ್ ರಾವ್ ಸ್ವಾಗತಿಸಿ, ಜಗದೀಶ್ ಶೆಟ್ಟಿ ವಂದಿಸಿದರು. ಅಮ್ರತಾಂಷು ಪ್ರಾರ್ಥನೆ ನೆರವೇರಿಸಿದರು. ಉಪ ತಹಶೀಲ್ದಾರ್ ನವೀನ್ ಬೆಂಜಪದವು ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment