ಕೊರಗಜ್ಜ ವೇಷ ಧರಿಸಿ ರಾದ್ದಾಂತವೆಬ್ಬಿಸಿದ್ದ ವರ ಬಾಸಿತ್ ಕೊನೆಗೂ ಪೊಲೀಸ್ ಬಲೆಗೆ  - Karavali Times ಕೊರಗಜ್ಜ ವೇಷ ಧರಿಸಿ ರಾದ್ದಾಂತವೆಬ್ಬಿಸಿದ್ದ ವರ ಬಾಸಿತ್ ಕೊನೆಗೂ ಪೊಲೀಸ್ ಬಲೆಗೆ  - Karavali Times

728x90

4 February 2022

ಕೊರಗಜ್ಜ ವೇಷ ಧರಿಸಿ ರಾದ್ದಾಂತವೆಬ್ಬಿಸಿದ್ದ ವರ ಬಾಸಿತ್ ಕೊನೆಗೂ ಪೊಲೀಸ್ ಬಲೆಗೆ 

 ಬಂಟ್ವಾಳ, ಫೆಬ್ರವರಿ 04, 2022 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ಳಾಡು ಗ್ರಾಮ ಸಾಲೆತ್ತೂರು ನಿವಾಸಿ ಹಝಿಜ್ ಅವರ ಮಗಳ ಮದುವೆ ಸಮಾರಂಭದಲ್ಲಿ ವಧುವಿನ ಮನೆಗೆ ಕೇರಳ ರಾಜ್ಯದ ಉಪ್ಪಳದ ಸೋಂಕಳು ನಿವಾಸಿ ಉಮರುಳ್ಳ ಬಾಷಿತ್ ಎಂಬ ವರನು ಹಿಂದೂ ಸಮುದಾಯದವರು ಆರಾಧಿಸುವ ಕೊರಗಜ್ಜ ದೈವದ ವೇಷ ಧರಿಸಿ ಮತ್ತು ಆತನ ಸಂಗಡಿಗರು ಅಸಭ್ಯವಾಗಿ ಕುಣಿದು ಕುಪ್ಪಳಿಸುತ್ತಾ ಬಂದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಲ್ಲದೇ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಅದರ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ದುಷ್ಕತ್ಯ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತರಾಗಿದ್ದ ವಿಟ್ಲ ಪೊಲೀಸರು ಕೊನೆಗೂ ಆರೋಪಿ ವರ ಬಾಷಿತ್ ನನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ. 

 ಮದುವೆ ಮನೆಯಲ್ಲಿ ಕೊರಗಜ್ಜ ವೇಷ ಧರಿಸಿ ಅವಹೇಳನಗೈದ ಬಗ್ಗೆ ವಿಟ್ಲ ಠಾಣೆಯಲ್ಲಿ ಜನವರಿ 7 ರಂದು ಅಪರಾಧ ಕ್ರಮಾಂಕ 04/2022 ಕಲಂ 153(ಎ) , 295(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿತ್ತು. 

ಸದ್ರಿ ಪ್ರಕರಣದಲ್ಲಿ ಜನವರಿ 10 ರಂದು ಕೇರಳದ ಅಹಮ್ಮದ್ ಮುಜಿತಬ ಯಾನೆ ಮುಜಿ ಮತ್ತು ಮೊಹಿಯುದ್ದಿನ್ ಮುನೀಸ್ ಎಂಬವರನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. 

ಪ್ರಕರಣದ ಪ್ರಮುಖ ಆರೋಪಿ ಉಮರುಲ್ ಬಾಸಿತ್ ಬಿನ್ ಇಬ್ರಾಹಿಂ, ರಹಮತ್ ಮಂಝಿಲ್ ಅಗರ್ತಿಮೂಲ ಬೇಕೂರು ಕಾಸರಗೋಡು ಕೇರಳ ರಾಜ್ಯ ಈತನ ಬಗ್ಗೆ ಮಾಹಿತಿ ಸಂಗ್ರಹಿಸಿ ಗುರುವಾರ (ಫೆ 2) ಕೇರಳ ರಾಜ್ಯದ ಎರ್ನಾಕುಲಂ ಎಂಬಲ್ಲಿಂದ ಹೊರ ದೇಶಕ್ಕೆ ಪಲಾಯಣ ಮಾಡಿ ತಲೆಮರೆಸಿಕೊಳ್ಳುವ ಬಗ್ಗೆ ತಿಳಿದುಕೊಂಡು ಕೇರಳ ರಾಜ್ಯದ ಕೊಚ್ಚಿನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್‌ ನೆಡುಂಬಸೆರಿ ಎರ್ನಾಕುಲಂ ಜಿಲ್ಲೆ ಬಳಿ ದಸ್ತಗಿರಿ ಮಾಡಿರುವ ವಿಟ್ಲ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. 

 ದ.ಕ. ಜಿಲ್ಲಾ ಎಸ್ಪಿ ಋಷಿಕೇಶ್ ಸೋನವಣೆ ಹಾಗೂ ಬಂಟ್ಚಾಳ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೊರಟ್ ಅವರ ಮಾರ್ಗದರ್ಶನದಲ್ಲಿ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ಇ ಅವರ ನೇತೃತ್ವದಲ್ಲಿ ಪಿಎಸ್ಐಗಳಾದ ಸಂದೀಪ್ ಕುಮಾರ್ ಶೆಟ್ಟಿ, ಸಂಜೀವ ಪುರುಷ, ಎಚ್.ಸಿ.ಗಳಾದ ಜಯಕುಮಾರ್, ದಿನೇಶ್ , ರಕ್ಷಿತ್, ಪಿಸಿ ಹೇಮರಾಜ್ ಅವರು ಆರೋಪಿ ಬಂಧಿಸಿದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಕೊರಗಜ್ಜ ವೇಷ ಧರಿಸಿ ರಾದ್ದಾಂತವೆಬ್ಬಿಸಿದ್ದ ವರ ಬಾಸಿತ್ ಕೊನೆಗೂ ಪೊಲೀಸ್ ಬಲೆಗೆ  Rating: 5 Reviewed By: karavali Times
Scroll to Top