ಬಂಟ್ವಾಳ, ಫೆಬ್ರವರಿ 27, 2022 (ಕರಾವಳಿ ಟೈಮ್ಸ್) : ತಾಲೂಕಿನ ಪುಣಚ ಗ್ರಾಮದ ಅಜ್ಜಿನಡ್ಕ ನಿವಾಸಿ ಮುಹಮ್ಮದ್ ಅಲಿ ಅವರ ಮನೆಗೆ ನುಗ್ಗಿದ ಕಳ್ಳರು ಲ್ಯಾಪ್ ಟಾಪ್ ಹಾಗೂ ಆಪಲ್ ಕಂಪೆನಿಯ ವಾಚ್ ಕಳವುಗೈದು ಪರಾರಿಯಾಗಿರುವ ಘಟನೆ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಮುಹಮ್ಮದ್ ಅವರ ಸಹೋದರ ಮುಹಮ್ಮದ್ ಸಿರಾಜ್ ಎಂ ಅವರು ವಿಟ್ಲ ಠಾಣೆಗೆ ಫಿರ್ಯಾದಿ ಸಲ್ಲಿಸಿದ್ದು, ಶನಿವಾರ ಬೆಳಿಗ್ಗೆ ಸುಮಾರು 10.30ರ ವೇಳೆಗೆ ಮನೆಯೊಡತಿ ತನ್ನ ಮಕ್ಕಳೊಂದಿಗೆ ಪುತ್ತೂರು ತಾಲೂಕಿನ ಮುಕ್ವೆಯಲ್ಲಿರುವ ತನ್ನ ತಾಯಿ ಮನೆಗೆ ತೆರಳಿದ್ದರು. ಇವರ ಮನೆಯ ಸೀಸಿ ಟೀವಿ ಮುಹಮ್ಮದ್ ಅಲಿ ಅವರ ಮೊಬೈಲಿಗೆ ಸಂಪರ್ಕ ಇದ್ದು, ಶನಿವಾರ ಮನೆಯ ಸೀಸಿ ಟಿವಿ ಬಗ್ಗೆ ಸಂಶಯಗೊಂಡ ಮುಹಮ್ಮದ್ ಅಲಿ ತನ್ನ ಸಹೋದರ ಮುಹಮ್ಮದ್ ಸಿರಾಜ್ ಗೆ ಕರೆ ಮಾಡಿ ಮನೆ ಕಡೆ ನೋಡುವಂತೆ ತಿಳಿಸಿದ ಹಿನ್ನಲೆಯಲ್ಲಿ ಸಿರಾಜ್ ಅಜ್ಜಿನಡ್ಕದಲ್ಲಿರುವ ಸಹೋದರನ ಮನೆಗೆ ತೆರಳಿ ನೋಡಿದಾಗ ಮನೆಯ ಹಿಂಭಾಗದ ಬಾಗಿಲನ್ನು ಆಯುಧದಿಂದ ಮೀಟಿದ ಕಳ್ಳರು ಒಳಪ್ರವೇಶಿಸಿ ಕೋಣೆಯ ಕಪಾಟಿನಲ್ಲಿ ಇಟ್ಟಿದ್ದ ಡೆಲ್ ಕಂಪೆನಿಯ ಲ್ಯಾಪ್ ಟಾಪ್ ಹಾಗೂ ಆಪಲ್ ಕಂಪೆನಿಯ ಕೈ ಗಡಿಯಾರವನ್ನು ಕಳವುಗೈದಿರುವುದಲ್ಲದೆ ಇನ್ನೊಂದು ಕೋಣೆಯಲ್ಲಿದ್ದ ಗೋಡೆಗೆ ಅಳವಡಿಸಿದ ಕಪಾಟಿನ ಬಾಗಿಲನ್ನು ತೆಗೆದು ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಹುಟುಕಾಟ ನಡೆಸಿ ಬೇರೇನೂ ಸಿಗದಾಗ ಪರಾರಿಯಾಗಿದ್ದಾರೆ.
ಕಳವುಗೈದ ಲ್ಯಾಪ್ ಟಾಪ್ ಸುಮಾರು 40 ಸಾವಿರ ರೂಪಾಯಿ ಮೌಲ್ಯ ಹೊಂದಿದ್ದು, ವಾಚಿನ ಮೌಲ್ಯ ಸುಮಾರು 5 ಸಾವಿರ ರೂಪಾಯಿ ಸಹಿತ ಒಟ್ಟು ಮೊತ್ತ 45 ಸಾವಿರ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಮುಹಮ್ಮದ್ ಸಿರಾಜ್ ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2022 ಕಲಂ 454, 457. 380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment