ಇನ್ನು ಮುಂದೆ ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 7ರ ವರೆಗೂ ಕಾರ್ಯನಿರ್ವಹಣೆ : ಸರಕಾರದಿಂದ ಮಹತ್ವದ ಆದೇಶ - Karavali Times ಇನ್ನು ಮುಂದೆ ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 7ರ ವರೆಗೂ ಕಾರ್ಯನಿರ್ವಹಣೆ : ಸರಕಾರದಿಂದ ಮಹತ್ವದ ಆದೇಶ - Karavali Times

728x90

15 February 2022

ಇನ್ನು ಮುಂದೆ ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 7ರ ವರೆಗೂ ಕಾರ್ಯನಿರ್ವಹಣೆ : ಸರಕಾರದಿಂದ ಮಹತ್ವದ ಆದೇಶ

ಬೆಂಗಳೂರು, ಫೆಬ್ರವರಿ 15, 2022 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಇದುವರೆಗೆ ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ಕಾರ್ಯನಿರ್ವಹಿಸುತ್ತಿದ್ದ ನೋಂದಣಿ ಮತ್ತು ಮುದ್ರಾಂಕ‌ ಇಲಾಖೆಯ ಕಚೇರಿಗಳು ಇನ್ನು ಮುಂದೆ ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೂ ಕಾರ್ಯನಿರ್ವಹಿಸಲಿದೆ. 

 ಈ ಬಗ್ಗೆ ಮಂಗಳವಾರ ರಾಜ್ಯ ಸರಕಾರ ಮಹತ್ವದ ಆದೇಶ ಹೊರಡಿಸಿದೆ. ನೋಂದಣಿ ಮತ್ತು ಮುದ್ರಾಂಕ‌ ಇಲಾಖೆಯ ಕಚೇರಿಗಳಲ್ಲಿ ಸದಾ ಜನಜಂಗುಳಿ ಇರುವ ಕಾರಣಕ್ಕೆ ಸಾರ್ವಜನಿಕರ ಹಿತದೃಷ್ಟಿಯಿಂದ ಕಚೇರಿಯ ಸಮಯವನ್ನು ವಿಸ್ತರಿಸಲಾಗಿದೆ. ಇನ್ನು ಮುಂದೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 7 ಗಂಟೆಯವರೆಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಚೇರಿಗಳೂ ತೆರೆದಿರುತ್ತವೆ ಎಂದು ನೋಂದಣೆ ಉಪ ಮಹಾ ಪರಿವೀಕ್ಷಕರು ಆದೇಶ ಹೊರಡಿಸಿದ್ದಾರೆ. ರಾ

ರಾಜ್ಯದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಉಪ ನೋಂದಣಿ ಕಚೇರಿ ಕರ್ತವ್ಯದ ಸಮಯ ಪರಿಷ್ಕರಣೆ ಮಾಡಲಾಗಿದ್ದು, ಈ ಸಂಬಂಧ ಎಲ್ಲಾ ಉಪ ನೋಂದಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಇನ್ನು ಮುಂದೆ ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 7ರ ವರೆಗೂ ಕಾರ್ಯನಿರ್ವಹಣೆ : ಸರಕಾರದಿಂದ ಮಹತ್ವದ ಆದೇಶ Rating: 5 Reviewed By: karavali Times
Scroll to Top