ಶಿವಾಜಿ ಮಹಾರಾಜರ ಧೈರ್ಯ, ಸಾಹಸ ಹಾಗೂ ನಾಯಕತ್ವ ಗುಣ ಯುವ ಜನತೆಗೆ ಮಾದರಿ : ತಹಶೀಲ್ದಾರ್ ಕವಿತಾ - Karavali Times ಶಿವಾಜಿ ಮಹಾರಾಜರ ಧೈರ್ಯ, ಸಾಹಸ ಹಾಗೂ ನಾಯಕತ್ವ ಗುಣ ಯುವ ಜನತೆಗೆ ಮಾದರಿ : ತಹಶೀಲ್ದಾರ್ ಕವಿತಾ - Karavali Times

728x90

19 February 2022

ಶಿವಾಜಿ ಮಹಾರಾಜರ ಧೈರ್ಯ, ಸಾಹಸ ಹಾಗೂ ನಾಯಕತ್ವ ಗುಣ ಯುವ ಜನತೆಗೆ ಮಾದರಿ : ತಹಶೀಲ್ದಾರ್ ಕವಿತಾ

ಬಂಟ್ವಾಳ, ಫೆಬ್ರವರಿ 19, 2022 (ಕರಾವಳಿ ಟೈಮ್ಸ್) : ಹದಿಹರೆಯದಲ್ಲಿಯೆ ಅಪ್ರತಿಮ ಯೋಧರಾಗಿ ಮಾತೃ ಭೂಮಿಗಾಗಿ ಪರಾಕ್ರಮದಿಂದ ಹೋರಾಡಿದ ಶಿವಾಜಿ ಇಂದಿನ ಯುವಜನತೆಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಶತ್ರು ಸೈನ್ಯವನ್ನು ಎದುರಿಸಿದ ಶಿವಾಜಿಯ ಧೈರ್ಯ ಸಾಹಸ ಮತ್ತು ನಾಯಕತ್ವದ ಗುಣ ಅನುಕರಣೀಯ ಎಂದು ಬಂಟ್ವಾಳ ಗ್ರೇಡ್-2 ತಹಶೀಲ್ದಾರ್ ಕವಿತಾ ಅಭಿಪ್ರಾಯಪಟ್ಟರು. 

ಬಂಟ್ವಾಳ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಶನಿವಾರ (ಫೆ 19) ನಡೆದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ನರೇಂದ್ರನಾಥ್ ಮಿತ್ತೂರು, ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ಆರ್ ವಿಜಯ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು

ಉಪಸ್ಥಿತರಿದ್ದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್ ಸ್ವಾಗತಿಸಿ ವಂದಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಶಿವಾಜಿ ಮಹಾರಾಜರ ಧೈರ್ಯ, ಸಾಹಸ ಹಾಗೂ ನಾಯಕತ್ವ ಗುಣ ಯುವ ಜನತೆಗೆ ಮಾದರಿ : ತಹಶೀಲ್ದಾರ್ ಕವಿತಾ Rating: 5 Reviewed By: karavali Times
Scroll to Top