ಬೆಂಗಳೂರು, ಫೆಬ್ರವರಿ 08, 2022 (ಕರಾವಳಿ ಟೈಮ್ಸ್) : ಉಡುಪಿಯಲ್ಲಿ ಕೆಲದಿನಗಳ ಹಿಂದೆ ಆರಂಭಗೊಂಡ ಹಿಜಾಬ್ ವಿವಾದ ಬಳಿಕ ವಿಚಿತ್ರ ತಿರುವು ಪಡೆದುಕೊಂಡು ಹಿಂದೂ ಸಂಘಟನೆಗಳು ಕೇಸರಿ ಮೊರೆ ಹೋದ ಪರಿಣಾಮ ಇದೀಗ ರಾಜ್ಯಾದ್ಯಂತ ಗೊಂದಲ ಹಾಗೂ ಆತಂಕದ ಪರಿಸ್ಥಿತಿ ನಿರ್ಮಾಣಗೊಂಡ ಹಿನ್ನಲೆಯಲ್ಲಿ ಮತ್ತು ಕೆಲವೆಡೆ ಹಿಂಸಾಚಾರ ರಾಷ್ಟ್ರಧ್ವಜದ ಜಾಗದಲ್ಲಿ ಕೇಸರಿ ಧ್ವಜ ಕಟ್ಟಿದ ಗೂಂಡಾ ಪ್ರವೃತ್ತಿಯಿಂದಾಗಿ ಉಂಟಾಗಿರುವ ವಿಷಮ ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ರಾಜ್ಯ ಸರಕಾರ ಬುಧವಾರದಿಂದ ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿದೆ.
ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ನಾನು ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಕರ್ನಾಟಕದ ಜನತೆಗೆ ಮನವಿ ಮಾಡುತ್ತೇನೆ. ಮುಂದಿನ ಮೂರು ದಿನಗಳ ಕಾಲ ಎಲ್ಲಾ ಪ್ರೌಢಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ನೀಡಲು ನಾನು ಆದೇಶಿಸಿದ್ದೇನೆ. ಸಂಬಂಧಪಟ್ಟವರೆಲ್ಲರೂ ಸಹಕರಿಸಬೇಕಾಗಿ ವಿನಂತಿ ಎಂದು ತಿಳಿಸಿದ್ದಾರೆ.
0 comments:
Post a Comment