ಮಂಗಳೂರು, ಫೆಬ್ರವರಿ 03, 2022 (ಕರಾವಳಿ ಟೈಮ್ಸ್) : ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಅಸಿಸ್ಟಂಟ್/ ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಯು, ಸಿಬ್ಬಂದಿ ನೇಮಕಾತಿ ಆಯೋಗದ ಸಿ.ಎಚ್.ಎಸ್.ಎಲ್ 2021 ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಯಲಿದೆ. ಇದರ ಅಧಿಸೂಚನೆ ಈಗಾಗಲೇ ಆಯೋಗದ ವೆಬ್ ಸೈಟ್ https://ssc.nic.in ನಲ್ಲಿ ಲಭ್ಯವಿದೆ.
ಮಾರ್ಚ್ 7ನೇ ತಾರೀಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿರುತ್ತದೆ. ಅರ್ಜಿ ಸಲ್ಲಿಸ ಬಯಸುವವರ ಕನಿಷ್ಠ ವಿದ್ಯಾರ್ಹತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಬೋರ್ಡ್ ಮೂಲಕ ಪೂರ್ತಿಗೊಳಿಸಿದ ಪಿಯುಸಿ ಅಥವಾ 12ನೇ ತರಗತಿ ಅಥವಾ ತತ್ಸಮಾನ. ಸದ್ಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ವಯೋಮಿತಿ 18-27 ವರ್ಷ (ಇತರ ವರ್ಗಗಳಿಗೆ ಅರ್ಹ ಸಡಿಲಿಕೆಯೊಂದಿಗೆ) ಇರಬೇಕು.
ಹುದ್ದೆಗಳ ಆರಂಭಿಕ ವೇತನ ತಿಂಗಳಿಗೆ 35,000/-+ ಇರುತ್ತದೆ ಹಾಗೂ ಕೇಂದ್ರ ಸರಕಾರಿ ನೌಕರರಿಗೆ ಲಭ್ಯವಿರುವ ಇತರ ಸೌಲಭ್ಯಗಳು ದೊರೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವೇತನ ಶ್ರೇಣಿ, ಮೀಸಲಾತಿ, ವಯೋಮಿತಿ, ಪರೀಕ್ಷಾ ವಿಧಾನ, ಪರೀಕ್ಷಾ ಶುಲ್ಕ ಹಾಗೂ ಇನ್ನಿತರ ಮಾಹಿತಿಗಳಿಗಾಗಿ https://ssc.nic.in ಗೆ ಭೇಟಿ ನೀಡಬಹುದು ಹಾಗೂ ಇದೇ ವೆಬ್ ಸೈಟಿನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನಿರ್ವಹಿಸಬೇಕಾದ ಕೆಲಸದ ರೀತಿ ಅಥವಾ ಯಾವುದೇ ಮಾಹಿತಿ ಅಗತ್ಯವಿದ್ದಲ್ಲಿ ಹತ್ತಿರದ ಅಂಚೆ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದು ಎಂದು ಮಂಗಳೂರು ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment