ಮೈಸೂರು, ಫೆಬ್ರವರಿ 04, 2022 (ಕರಾವಳಿ ಟೈಮ್ಸ್) : ಅತಾಯೆ ರಸೂಲ್ ಮೂಮೆಂಟ್ ಮೈಸೂರು ಇದರ ಆಶ್ರಯದಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುವ ಹಝ್ರತ್ ಖ್ವಾಜಾ ಮುಯೀನುದ್ದೀನ್ ಚಿಸ್ತಿಯ್ಯಿಲ್ ಅಜ್ಮೀರಿ (ರ) ಅವರ ಅನುಸ್ಮರಣೆ “ಖ್ವಾಜಾ ಕೀ ಛಟ್ಟಿ” ಕಾರ್ಯಕ್ರಮವು ಫೆಬ್ರವರಿ 8 ರಂದು ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಇಲ್ಲಿನ ಗೌಸಿಯಾ ನಗರದ ಎ ಬ್ಲಾಕ್, ಟಿ ಸಿ ಗಲ್ಲಿಯ ಆಸ್ತಾನೆ ಖ್ವಾಜಾ ಇಲ್ಲಿ ನಡೆಯಲಿದೆ.
ಖ್ವಾಜಾ ಬಲ್ಹಾರ್ ಅಲಿ ಶಾ ಚಿಶ್ತಿ ಮದ್ದೂರು ಅವರ ದುವಾಶಿರ್ವಚನಗೈಯಲಿದ್ದು, ಖ್ವಾಜಾ ಅಝೀಂ ಅಲಿ ಶಾ ಚಿಶ್ತೀ ಮೈಸೂರು ಅವರು ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಸೂಫಿ ಸಂತರು, ಉಲಮಾಗಳು, ಶರಣ ಸಂತರು, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಕುರ್‍ಆನ್ ಪಾರಾಯಣ, 11 ಗಂಟೆಗೆ ಧ್ವಜಾರೋಹಣ, 11.30ಕ್ಕೆ ಸಭಾ ಕಾರ್ಯಕ್ರಮ, ಮಗ್ರಿಬ್ ಬಳಿಕ ಛಟ್ಟಿಯ ಫಾತಿಹಾ ಹಾಗೂ ನಅತೇ ಶರೀಫ್, ರಾತ್ರಿ 8.30ಕ್ಕೆ ಸಾರ್ವಜನಿಕ ಅನ್ನದಾನ ಹಾಗೂ ರಾತ್ರಿ 10ರಿಂದ ಖವ್ವಾಲಿ ಕಾರ್ಯಕ್ರಮ ನಡೆಯಲಿದೆ ಎಂದು ಅತಾಯೆ ರಸೂಲ್ ಮೂಮೆಂಟ್ ಪ್ರಕಟಣೆ ತಿಳಿಸಿದೆ.
0 comments:
Post a Comment