ಕಲಾಬಾಗಿಲು : ಜೇಣುಗೂಡಿಗೆ ಕುಕ್ಕಿದ ಗಿಡುಗ, ಕೆರಳಿದ ನೊಣಗಳಿಂದ ಮೀಟಿಂಗಿಗೆ ತೆರಳುತ್ತಿದ್ದವರ ಮೇಲೆ ದಾಳಿ, 9 ಮಂದಿ ಆಸ್ಪತ್ರೆಗೆ - Karavali Times ಕಲಾಬಾಗಿಲು : ಜೇಣುಗೂಡಿಗೆ ಕುಕ್ಕಿದ ಗಿಡುಗ, ಕೆರಳಿದ ನೊಣಗಳಿಂದ ಮೀಟಿಂಗಿಗೆ ತೆರಳುತ್ತಿದ್ದವರ ಮೇಲೆ ದಾಳಿ, 9 ಮಂದಿ ಆಸ್ಪತ್ರೆಗೆ - Karavali Times

728x90

27 February 2022

ಕಲಾಬಾಗಿಲು : ಜೇಣುಗೂಡಿಗೆ ಕುಕ್ಕಿದ ಗಿಡುಗ, ಕೆರಳಿದ ನೊಣಗಳಿಂದ ಮೀಟಿಂಗಿಗೆ ತೆರಳುತ್ತಿದ್ದವರ ಮೇಲೆ ದಾಳಿ, 9 ಮಂದಿ ಆಸ್ಪತ್ರೆಗೆ

ಬಂಟ್ವಾಳ, ಫೆಬ್ರವರಿ 27, 2022 (ಕರಾವಳಿ ಟೈಮ್ಸ್) : ತಾಲೂಕಿನ ಇರ್ವತ್ತೂರು ಗ್ರಾಮದ ಕಲಾಬಾಗಿಲುವಿನಲ್ಲಿ ಭಾನುವಾರ ಬೆಳಿಗ್ಗೆ ಜೇಣು ನೊಣಗಳ ಗೂಡಿಗೆ ಗಿಡುಗ ಕುಟುಕಿದ ಪರಿಣಾಮ ಕೆರಳಿದ ನೊಣಗಳು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಮೀಟಿಂಗಿಗೆ ರಸ್ತೆಯಲ್ಲಿ ನಡೆದುಕೊಂಡು ತೆರಳುತ್ತಿದ್ದ ಸ್ಥಳೀಯರ ಮೇಲೆ ದಾಳಿ ಮಾಡಿದ್ದು, 9 ಮಂದಿ ಸ್ಥಳೀಯ ನಿವಾಸಿಗಳು ಗಾಯಗೊಂಡಿದ್ದಾರೆ. 

ಸ್ಥಳೀಯ ನಿವಾಸಿಗಳಾದ ಅರುಣ್ ಶೆಟ್ಟಿ (34), ಐತಪ್ಪ ಶೆಟ್ಟಿ (76), ಗಂಗಯ್ಯ ಗೌಡ (60), ಶೀನ ಶೆಟ್ಟಿ (48), ಲಲಿತಾ (49) ಸಹಿತ 9 ಮಂದಿ ಗಾಯಗೊಂಡಿದ್ದು, ಅವರನ್ನು ಪೂಂಜಾಲಕಟ್ಟೆ ಸರಕಾರಿ ಪ್ರಾಥಮಿಕ ಕೇಂದ್ರದ 108 ಅಂಬ್ಯುಲೆನ್ಸ್ ಮೂಲಕ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕಲಾಬಾಗಿಲು : ಜೇಣುಗೂಡಿಗೆ ಕುಕ್ಕಿದ ಗಿಡುಗ, ಕೆರಳಿದ ನೊಣಗಳಿಂದ ಮೀಟಿಂಗಿಗೆ ತೆರಳುತ್ತಿದ್ದವರ ಮೇಲೆ ದಾಳಿ, 9 ಮಂದಿ ಆಸ್ಪತ್ರೆಗೆ Rating: 5 Reviewed By: karavali Times
Scroll to Top