ಜೈಭಾರತ್ ನಂದಾವರ ತಂಡ ಮತ್ತೆ ಸಿಂಹ ಘರ್ಜನೆಗೆ ಸಜ್ಜಾಗಿರುವುದು ಸಂತೋಷ ಶಾಲಾ ದಿನಗಳಲ್ಲಿ ನಾನೂ ಕೂಡಾ ಜೈ ಭಾರತ್ ತಂಡದ ಕ್ರಿಕೆಟ್ ನೋಡಿದ್ದೆ
ಬಂಟ್ವಾಳ, ಫೆಬ್ರವರಿ 06, 2022 (ಕರಾವಳಿ ಟೈಮ್ಸ್) : ಯುವಕರು ಹಾಗೂ ವಿದ್ಯಾರ್ಥಿಗಳು ಒಟ್ಟಾದರೆ ದೇಶದ ಭವಿಷ್ಯವನ್ನೇ ಬದಲಾಯಿಸಲು ಸಾಧ್ಯವಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಪಾಣೆಮಂಗಳೂರು ಸಮೀಪದ ನಂದಾವರ ಜೈ ಭಾರತ್ ಸ್ಪೋಟ್ರ್ಸ್ ಕ್ಲಬ್ ಇಲ್ಲಿನ ಶ್ರೀ ಶಾರದಾ ಪ್ರೌಢಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಜೈ ಭಾರತ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ ಅವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ವಿದ್ಯಾರ್ಥಿ ದಿಸೆಯಿಂದಲೇ ಹೋರಾಟ ಆರಂಭಿಸಿದ್ದರು. ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಹೋರಾಟಕ್ಕೆ ಕಿಚ್ಚು ನೀಡಿದ್ದ ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ದೊರೆಯುವವರೆಗೂ ವಿರಮಿಸಲಿಲ್ಲ. ಅದೇ ರೀತಿ ಯುವಕರು ಕೂಡಾ ಒಟ್ಟಾದರೆ ದೇಶದ ಎಲ್ಲ ಅವ್ಯವಸ್ಥೆಗಳಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಿದ್ದು, ಯುವಕರನ್ನು ಒಗ್ಗೂಡಿಸುವ ಪ್ರಮುಖ ಒಂದು ಕ್ಷೇತ್ರವಾಗಿದೆ ಕ್ರೀಡಾ ಕ್ಷೇತ್ರ. ಕ್ರೀಡೆಯಲ್ಲಿ ಯಾವುದೇ ವ್ಯಕ್ತಿಯ ಹೆಸರು, ಜಾತಿ-ಧರ್ಮ, ವರ್ಗಗಳ ಮೂಲಕ ಗುರುತಿಸಲಾಗುವುದಿಲ್ಲ. ಬದಲಾಗಿ ಆತನ ಕ್ರೀಡಾ ಸಾಮಥ್ರ್ಯದೊಂದಿಗೆ ಆತನನ್ನು ಗುರುತಿಸಲಾಗುತ್ತದೆ. ಜಾತಿ-ಧರ್ಮ, ವರ್ಗ-ಪಂಗಡ ಹಾಗೂ ದೇಶಗಳ ಗಡಿ ಸಮಸ್ಯೆಗಳ ಎಲ್ಲೆಯನ್ನೂ ಮೀರಿ ಸೌಹಾರ್ದತೆ ಮೆರೆಯುವ ಮೂಲಕ ಸಾಮಾಜಿಕ ಸಾಮರಸ್ಯ ಸಾರುವ ಕ್ರೀಡಾ ಕ್ಷೇತ್ರ ಸದಾ ಪ್ರೋತ್ಸಾಹ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ನಂದಾವರದಲ್ಲಿ ಕಳೆದ ಏಳೂವರೆ ದಶಕಗಳಿಗೂ ಮಿಕ್ಕಿದ ಇತಿಹಾಸ ಹೊಂದಿರುವ ಜೈ ಭಾರತ್ ಕ್ರಿಕೆಟ್ ತಂಡ ಇದೀಗ ಮತ್ತೆ ಸಿಂಹ ಘರ್ಜನೆಗೆ ಸಜ್ಜಾಗಿರುವುದು ಸಂತೋಷದ ವಿಚಾರವಾಗಿದ್ದು, ಈ ಜೈಭಾರತ್ ಸ್ಪೋಟ್ರ್ಸ್ ಕ್ಲಬ್ ಮೂಲಕ ಈ ಭಾಗದ ಕ್ರೀಡಾ ತಲೆಮಾರುಗಳ ಕ್ರೀಡಾ ಸಾಮಥ್ರ್ಯಕ್ಕೆ ಸದಾ ಸ್ಪೂರ್ತಿಯಾಗಲಿ. ತಾವುಗಳು ಕೈಗೊಳ್ಳುವ ಎಲ್ಲಾ ಕ್ರೀಡಾ ಚಟುವಟಿಕೆಗಳಿಗೂ ನನ್ನ ಸಂಪೂರ್ಣ ಬೆಂಬಲ-ಸಹಕಾರ ಇದ್ದೇ ಇದೆ ಎಂದು ಇದೇ ವೇಳೆ ಭರವಸೆ ನೀಡಿದರು.
ಈ ಸಂದರ್ಭ ಸಲೀಂ ನಂದಾವರ, ಶರೀಫ್ ನಂದಾವರ, ಎನ್ ಇದ್ದಿನಬ್ಬ, ಇಕ್ಬಾಲ್ ಪವರ್, ಅಬ್ದುಲ್ ಅಝೀಝ್ ಆಲಡ್ಕ, ಮುಹಮ್ಮದ್ ನಂದಾವರ, ಇಸ್ಮಾಯಿಲ್ ನಂದಾವರ, ಪಿ ಬಿ ಹಾಮದ್ ಹಾಜಿ ಪಾಣೆಮಂಗಳೂರು, ಪುತ್ತೋನು ನಂದಾವರ, ಮುಸ್ತಫಾ ನಂದಾವರ, ರಶೀದ್ ನಂದಾವರ ಅಬ್ದುಲ್ ರಹಿಮಾನ್ ಮೋನು ಮೆಲ್ಕಾರ್, ಭುವನೇಶ್ ಬಂಗ್ಲೆಗುಡ್ಡೆ, ಅಬ್ದುಲ್ ಹಮೀದ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment