ಬಂಟ್ವಾಳ, ಫೆಬ್ರವರಿ 18, 2022 (ಕರಾವಳಿ ಟೈಮ್ಸ್) : ಇಲ್ಲಿನ ರೋಟರಿ ಕ್ಲಬ್ ವತಿಯಿಂದ ತಾಲೂಕಿನ ಬಿ ಸಿ ರೋಡು ಸಮೀಪದ ಅಜ್ಜಿಬೆಟ್ಟುವಿನ ಬಿ ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೌರವ ಶಿಕ್ಷಕಿಯರಿಗೆ ವೇತನದ ನೆರವಾಗಿ 70 ಸಾವಿರ ರೂಪಾಯಿ ಮೊತ್ತವನ್ನು ಹಸ್ತಾಂತರಿಸಲಾಯಿತು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮುಹಮ್ಮದ್ ವಳವೂರು, ಕಾರ್ಯದರ್ಶಿ ಧನಂಜಯ ಬಾಳಿಗಾ ಬುಧವಾರ ಶಾಲೆಗೆ ಆಗಮಿಸಿ ಈ ಆರ್ಥಿಕ ನೆರವು ಹಸ್ತಾಂತರಿಸಿದರು. ಈ ಸಂದರ್ಭ ಶಾಲಾಭಿವೃದ್ಧಿ ಮತ್ತು ಮೇಲುಸ್ತುವರಿ ಸಮಿತಿ ಅಧ್ಯಕ್ಷ ಹರೀಶ ಮಾಂಬಾಡಿ, ಮುಖ್ಯ ಶಿಕ್ಷಕಿ ಕುಶಲಾ, ಶಿಕ್ಷಕರಾದ ನವೀನ್ ಪಿ ಎಸ್, ಸುಶೀಲಾ, ಹೇಮಾವತಿ, ತಾಹಿರಾ ಹಾಗೂ ಗೌರವ ಶಿಕ್ಷಕಿಯರು ಉಪಸ್ಥಿತರಿದ್ದರು.
0 comments:
Post a Comment