ಬಂಟ್ವಾಳ, ಜನವರಿ 10, 2022 (ಕರಾವಳಿ ಟೈಮ್ಸ್) : ತಾಲೂಕಿನ ಶಂಭೂರು ಗ್ರಾಮದ ನಾಯಿಲ-ಬೆಟ್ಟುಗದ್ದೆ ನಿವಾಸಿ, ನವವಿವಾಹಿತ ಯತಿರಾಜ್ (36) ಅವರು ಭಾನುವಾರ ತೆಂಗಿನಮರ ಕಡಿಯುವ ವೇಳೆ ಮರ ಬಿದ್ದು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಇಲ್ಲಿನ ನಿವಾಸಿ ದಿವಣಗತ ಪೂವಪ್ಪ ಪೂಜಾರಿ ಅವರ ಪುತ್ರರಾಗಿರುವ ಯತಿರಾಜ್ ಅವರು ಮರ ಕಡಿಯುವ ಕೆಲಸ ಮಾಡುತ್ತಿದ್ದು, ಭಾನುವಾರ ಸ್ಥಳೀಯ ಕೃಷಿಕರ ತೋಟದಲ್ಲಿ ತೆಂಗಿನಮರ ಕಡಿಯುವ ವೇಳೆ ಈ ಅವಘಡ ಸಂಭವಿಸಿದೆ. ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸ್ಥಳೀಯರು ಸಾಗಿಸಿದರಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಯತಿರಾಜ್ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ.
0 comments:
Post a Comment