ಬಂಟ್ವಾಳ, ಜನವರಿ 25, 2022 (ಕರಾವಳಿ ಟೈಮ್ಸ್) : ತಾಲೂಕಿನ ಶಂಭೂರು ಗ್ರಾಮದ ಕೊರಜಿಪಲ್ಕೆಯಿಂದ ಶ್ರೀ ಕುಂದಾಯ ಪಂಜುರ್ಲಿ ದೈವದ ಭಂಡಾರದ ಸಾನದವರೆಗಿನ ರಸ್ತೆಯನ್ನು 14 ಲಕ್ಷ ರೂಪಾಯಿ ಅನುದಾನದಲ್ಲಿ ಕಾಂಕ್ರೀಟಿಕರಣ ಮತ್ತು ಶಂಭೂರು ಗ್ರಾಮದ ಕಲೆಂಜಿಗುರಿಯಿಂದ ಗುಂಪಕಲ್ಲು ದೋಂಡಕೋಡಿ ರಸ್ತೆಯನ್ನು 5 ಲಕ್ಷ ರೂಪಾಯಿ ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡ ಈ ಎರಡು ಕಾಮಗಾರಿಗಳನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಉದ್ಫಾಟಿಸಿದರು.
ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಜಿ ಪಂ ಮಾಜಿ ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ, ಬಂಟ್ವಾಳ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಆನಂದ ಶಂಭೂರು, ಗ್ರಾ ಪಂ ಉಪಾಧ್ಯಕ್ಷ ಪ್ರಕಾಶ್ ಮಡಿಮುಗೇರ, ಪಂಚಾಯತ್ ಸದಸ್ಯರಾದ ಯೋಗಿಶ್, ಸಂತೋಷ್, ಸುಜಾತ, ಹೇಮಲತಾ, ಸವಿತಾ, ನೆಟ್ಲಮುಡ್ನೂರು ಗ್ರಾ ಪಂ ಅಧ್ಯಕ್ಷ ಸತೀಶ್, ಬರಿಮಾರು ಗ್ರಾ ಪಂ ಉಪಾಧ್ಯಕ್ಷ ಸದಾಶಿವ, ಕುಂದಾಯ ಪಂಜುರ್ಲಿ ಲೆಕ್ಕೆಸಿರಿ ದೈವಸ್ಥಾನದ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ದಿನೇಶ್ ಆರ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment