ಬಂಟ್ವಾಳ, ಜನವರಿ 06, 2022 (ಕರಾವಳಿ ಟೈಮ್ಸ್) : ರಾರಾಸಂ ಫೌಂಡೇಶನ್ ಬಂಟ್ವಾಳ ಇದರ ವತಿಯಿಂದ 11ನೇ ವರ್ಷದ ಸಾಂಸ್ಕøತಿಕ ಕಲರವ “ರಾರಾ ಸಂಭ್ರಮ-21” ಕಾರ್ಯಕ್ರಮವು ಬಿ ಸಿ ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಉದ್ಘಾಟಿಸಿದರು. ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ ವಸಂತ್ ಬಾಳಿಗ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ನಿವೃತ್ತ ಮುಖ್ಯ ಶಿಕ್ಷಕ ಬಿ ರಾಮಚಂದ್ರ ರಾವ್ ಅವರ “ಕ್ಷ ಕಿರಣ” ಪುಸ್ತಕ ಬಿಡುಗಡೆಗೊಳಿಸಲಾಯಿತು. ಬಹುಮುಖ ಬಾಲ ಪ್ರತಿಭೆ ಚಿನ್ವೀಶ್ ಕೊಟ್ಟಾರಿ ಅವರಿಗೆ “ರಾರಾಸಂ” ಪುರಸ್ಕಾರ ನೀಡಿ ಗೌರವಿಸಲಾಯಿತು.
ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ವಯೋಮಾನದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸದಾಶಿವ ಡಿ ತುಂಬೆ, ಶ್ರೀ ಕ್ಷೇತ್ರ ನಂದಾವರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಶಿಕ್ಷಣ ಸಂಯೋಜಕಿ ಸುಜಾತ ರವಿಶಂಕರ್, ಜೆಸಿಐ ಬಂಟ್ವಾಳ ಇದರ ನಿಯೋಜಿತ ಅಧ್ಯಕ್ಷ ರೋಷನ್ ರೈ, ಉದ್ಯಮಿ ಸುನಿಲ್ ಬಿ, ರಿಧಂ ಸುರತ್ಕಲ್ ಇದರ ಅಧ್ಯಕ್ಷ ಸುಧಾಕರ ಸಾಲಿಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಾಗೇಶ ಬಾಳೆಹಿತ್ಲು, ಈಶ್ವರ್ ಮಿತ್ತೂರು, ದಿವ್ಯರಾಣಿ, ಚೆನ್ನ ಕೇಶವ ಮಾಸ್ತರ್, ಮುರಳಿಕೃಷ್ಣ ರಾವ್, ಜಲಜಾಕ್ಷಿ ಕುಲಾಲ್, ಲಯನ್ಸ್ ಸಂಸ್ಥೆಯ ದಾಮೋದರ್ ಬಿ ಎಂ, ಸುಧಾಕರ್ ಆಚಾರ್ಯ, ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ರಾರಾಸಂ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಪ್ರಸ್ತಾವನೆಗೈದರು. ನಿದರ್ೇೀಶಕರಾದ ದಾಮೋದರ ಮಾಸ್ಟರ್ ಸ್ವಾಗತಿಸಿ, ತುಳಸೀದಾಸ್ ಪೈ ವಂದಿಸಿದರು. ಕೇಶವ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment