ಬಂಟ್ವಾಳ, ಜನವರಿ 26, 2022 (ಕರಾವಳಿ ಟೈಮ್ಸ್) : ಭಾರತೀಯ ಸಂವಿಧಾನವು ವಿಶ್ವದಲ್ಲೇ ತುಂಬಾ ವಿಶೇಷ ಮತ್ತು ವಿಶಿಷ್ಟವಾದ ಸಂವಿಧಾನವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಹೇಳಿದರು.
ಫರಂಗಿಪೇಟೆ, ಮಾರಿಪಳ್ಳ, ಸುಜೀರ್ ಪ್ರೌಢ ಶಾಲೆ, ಪುದು ಮಾಪಿಲ ಹಿರಿಯ ಪ್ರಾಥಮಿಕ ಶಾಲೆ, ಮೌಲಾನಾ ಆಝಾದ್ ಆಂಗ್ಲ ಮಾಧ್ಯಮ ಶಾಲೆ ಫರಂಗಿಪೇಟೆ ಇವುಗಳ ಅಶ್ರಯದಲ್ಲಿ ಬುಧವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು ಮಾತನಾಡಿದ ಅವರು ನಮ್ಮ ಭವ್ಯ ಭಾರತ ದೇಶದಲ್ಲಿ ಬೇರೆ ಬೇರೆ ಧರ್ಮಗಳಲ್ಲಿ ಬೇರೆ ಬೇರೆ ಆಚರಣೆಗಳು ಇದ್ದರೂ ಒಂದೇ ಸಂವಿಧಾನದ ಅಡಿಯಲ್ಲಿ ಉತ್ತಮ ಸಂಸ್ಕೃತಿ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವಂತಹ ಪರಂಪರೆ ನಮ್ಮ ಭಾರತ ದೇಶದ ವಿಶೇಷ ಎಂದರು.
ಭಾರತ ಪ್ರಪಂಚದಲ್ಲಿಯೇ ಬಹು ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಭಾರತೀಯ ಸಂವಿಧಾನವನ್ನು ವಿಶ್ವದ ಅನೇಕ ರಾಷ್ಟ್ರಗಳು ಮಾದರಿಯಾಗಿ ಸ್ವೀಕರಿಸಿದೆ. ರಾಷ್ಟ್ರೀಯ ಹಬ್ಬಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಪ್ರತಿದಿನವೂ ದೇಶಾಭಿಮಾನ ಇರಬೇಕು ಎಂದರು.
ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪುದು ಮಾಪಿಳ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ರಮ್ಲಾನ್ ಕುಂಪನಮಜಲು, ಸದಸ್ಯ ಭಾಸ್ಕರ್ ರೈ, ಶಿಕ್ಷಕರಾದ ಮುಹಮ್ಮದ್ ತುಂಬೆ, ವಿಜಯ, ಸುಜೀರ್ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶಶಿ ಮಂಗಲಾ, ಪುದು ಮಾಪಿಲ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯರಾದ ಸುನಿತಾ, ಹರ್ಷಿತ, ರೇವತಿ, ಅಫ್ರಿನಾ, ಮೌಲಾನಾ ಅಝಾದ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ವಿಜೇತಾ, ಶಿಕ್ಷಕಿಯರಾದ ಅಶ್ವಿತಾ, ಸಫ್ರಿನಾ, ಶಮ್ನಾ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment