ಮಂಗಳೂರು, ಜನವರಿ 26, 2022 (ಕರಾವಳಿ ಟೈಮ್ಸ್) : ಗಣರಾಜ್ಯೊತ್ಸವ ದಿನ ಪ್ರಯುಕ್ತ ಹಾಗೂ ಎಸ್.ಕೆ.ಎಸ್.ಬಿ.ವಿ. ಬಾಲ ಇಂಡಿಯಾ ವತಿಯಿಂದ ಧ್ವಜಾರೋಹಣಾ ಕಾರ್ಯಕ್ರಮ ಅಡ್ಯಾರು-ಕಣ್ಣೂರು ಸಮೀಪದ ಬೀಡು ತರ್ಬಿಯತುಲ್ ಅನಾಮ್ ಮದ್ರಸದಲ್ಲಿ ಬುಧವಾರ ನಡೆಯಿತು.
ಮುಹಮ್ಮದ್ ಝಮೀರ್ ಅನ್ಸಾರಿ ದುಆ ನೇತೃತ್ವ ವಹಿಸಿದ್ದರು. ಮದ್ರಸ ಅಧ್ಯಕ್ಷ ಅಬ್ದುಲ್ ಮಜೀದ್ ಇ.ಕೆ ಟಿಂಬರ್ ಅವರು ಧ್ವಜಾರೋಹಣಗೈದರು. ಅಬೂಬಕ್ಕರ್ ಸಿದ್ದೀಕ್ ಮೌಲವಿ ಸಂದೇಶ ಭಾಷಣಗೈದರು. ಮದ್ರಸ ಕಾರ್ಯದರ್ಶಿ ಮುನೀರ್ ಅಬ್ದುಲ್ ಖಾದರ್, ಜೊತೆ ಕಾರ್ಯದರ್ಶಿ ಅಬ್ದುಲ್ ರಝಾಕ್, ಪ್ರಮುಖರಾದ ರಿಯಾಝ್, ಅಬ್ದುಲ್‍ಸಲಾಂ, ಸ್ವಾದಿಕ್ ಪೋಸ್ಟ್ ಆಫೀಸ್, ಝೈನುಲ್ ಆಬಿದ್, ಮುಹಮ್ಮದ್ ಶಾನಿಂ, ಮುಹಮ್ಮದ್ ರಿಹಾನ್ ಮೊದಲಾದವರು ಭಾಗವಹಿಸಿದ್ದರು. ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
0 comments:
Post a Comment