ಬಂಟ್ವಾಳ, ಜನವರಿ 03, 2022 (ಕರಾವಳಿ ಟೈಮ್ಸ್) : ಉಡುಪಿ ಜಿಲ್ಲೆಯ ಕೋಟಾದಲ್ಲಿ ಇತ್ತೀಚೆಗೆ ಆದಿವಾಸಿ ಕೊರಗ ಸಮುದಾಯದವರ ಮೆಹಂದಿ ಕಾರ್ಯಕ್ರಮದಲ್ಲಿ ಡಿ.ಜೆ ಅಳವಡಿಸಿರುವುದಕ್ಕೆ ಪೆÇೀಲೀಸರು ಕೊರಗ ಸಮುದಾಯದ ಮೇಲೆ ಮಾರಣಾಂತಿಕ ರೀತಿಯಲ್ಲಿ ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ ಸೋಮವಾರ (ಜ 3) ಬಿ ಸಿ ರೋಡಿನಲ್ಲಿ ಪ್ರಗತಿಪರ ಹಾಗೂ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂ ಬಂಟ್ವಾಳ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ, ಬಿಜೆಪಿ ಸರಕಾರದ ಆಡಳಿತದಲ್ಲಿ ದಿನ ನಿತ್ಯ ದಲಿತರ ಮೇಲೆ ದಾಳಿಯಾಗುತ್ತಿದ್ದು ಈಗ ಪೆÇೀಲೀಸರ ಮೂಲಕ ದಾಳಿ ನಡೆಸಲಾಗುತ್ತಿದೆ. ಪೆÇೀಲೀಸ್ ಇಲಾಖೆ ಸಂಘಪರಿವಾರದ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದು, ದಲಿತ ಸಮುದಾಯದವರು ಇಂದು ಶಿಕ್ಷಿತರಾಗಿ ಸಂಭ್ರಮದಿಂದ ಮದುವೆ ಕಾರ್ಯಕ್ರಮ ಮಾಡುವುದನ್ನು ಸಹಿಸದ ಮೇಲ್ವರ್ಗದವರು ಪೆÇೀಲೀಸರ ಮುಖಾಂತರ ದಲಿತರ ಮೇಲೆ ದಾಳಿ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪೆÇೀಲೀಸರ ಕಣ್ಣೆದುರೇ ಇಂದು ಹಲವು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೂ ಪೆÇೀಲೀಸರು ಕ್ರಮ ಕೈಗೊಳ್ಳಲು ವಿಫಲವಾಗಿದ್ದಾರೆ. ಕಾನೂನು ರಕ್ಷಿಸಬೇಕಾದ ಪೆÇೀಲಿಸರು ಈ ದೇಶದ ಕಾನೂ£ನಿಗೆ ವಿರುದ್ದವಾಗಿ ವರ್ತಿಸುತ್ತಿದ್ದು ಬಿಜೆಪಿಗರನ್ನು ಮೆಚ್ಚಿಸಲು ಇಂತಹ ದೌರ್ಜನ್ಯ ನಡೆಸುತ್ತಿದ್ದಾರೆ. ತಪ್ಪಿತಸ್ಥ ಪೆÇೀಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಿರಂತರ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದರು.
ಹಿಂದೂ ಒಂದು ಎನ್ನುವ ಶೋಭಾ ಕರಂದ್ಲಾಜೆ ಈಗ ಎಲ್ಲಿದ್ದಾರೆ ಎಂದ ರಾಮಣ್ಣ ದಲಿತ ಸಮುದಾಯದ ಸಚಿವ ಅಂಗಾರ ಈ ಬಗ್ಗೆ ಮೌನ ವಹಿಸಿದ್ದು ಯಾಕೆ ಎಂದು ಪ್ರಶ್ನಿಸಿದರಲ್ಲದೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎಐಟಿಯುಸಿ ಜಿಲ್ಲಾ ಮುಖಂಡ ಬಿ ಶೇಖರ್ ಮಾತನಾಡಿ ಬಿಜೆಪಿ ಸರಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕೊರಗ ಸಮುದಾಯದ ಮೇಲೆ ದೌರ್ಜನ್ಯ ನಡೆಸಿದ ಪೆÇೀಲಿಸರ ಮೇಲೆ ಕ್ರಮ ಕೈಗೊಳ್ಳುವ ಬದಲು ದೌರ್ಜನ್ಯ ಕ್ಕೆ ಒಳಗಾದವರ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ. ದೌರ್ಜನ್ಯಕ್ಕೆ ಒಳಗಾದವರ ದ್ವನಿ ಹತ್ತಿಕ್ಕಲು ಈ ರೀತಿ ಅವರ ಮೇಲೆಯೇ ಪ್ರಕರಣ ದಾಖಲಿಸಿ ಪರಿಹಾರದ ನಾಟಕ ಆಡುತ್ತಿದ್ದಾರೆ ಎಂದು ಆರೋಪಿಸಿದರು.
ಅಂಬೇಡ್ಕರ್ ಯುವ ವೇದಿಕೆಯ ಮುಖಂಡ ಸತೀಶ್ ಅರಳ ಮಾತನಾಡಿ, ಸ್ವಾತಂತ್ರ್ಯ ದೊರೆತು ಏಳು ದಶಕಗಳು ಕಳೆದರೂ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು ಸಂವಿಧಾನ ಬದ್ದವಾಗಿ ಕೆಲಸ ಮಾಡಬೇಕಾದ ಪೆÇೀಲಿಸರು ಮನುವಾದಿಗಳ ಅಣತಿಯಂತೆ ಕಾರ್ಯನಿರ್ವಹಿಸಿತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಮುಖರಾದ ರಾಜಾ ಚೆಂಡ್ತಿಮಾರ್, ಪ್ರಕಾಶ್ ಶೆಟ್ಟಿ ಶ್ರೀ ಶೈಲ, ಹಾರೂನ್ ರಶೀದ್, ಉದಯ ಕುಮಾರ್ ಬಂಟ್ವಾಳ, ದಿನೇಶ ಆಚಾರಿ, ಕೃಷ್ಣಪ್ಪ ಪುದ್ದೊಟ್ಟು, ಬಿ ಟಿ ಕುಮಾರ್, ಸುರೇಂದ್ರ ಕೋಟ್ಯಾನ್, ಉಮೇಶ್ ವಾಮದಪದವು, ಖಲೀಲ್ ಬಾಪು, ಲಿಯಾಕತ್ ಖಾನ್, ನಾರಾಯಣ ಪೆÇಯಿಲೋಡಿ, ನಾರಾಯಣ ನಂದಾವರ, ಸುರೇಶ್ ಕುಮಾರ್, ತುಳಸೀದಾಸ್ ವಿಟ್ಲ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment