ಬಂಟ್ವಾಳ, ಜನವರಿ 31, 2022 (ಕರಾವಳಿ ಟೈಮ್ಸ್) : ದೇಶದಲ್ಲಿ ದೀರ್ಘ ಕಾಲ ಆಳ್ವಿಕೆ ನಡೆಸಿದ ಕಾಂಗ್ರೆಸ್ ಸಾಧನೆಗಳು ಜನರಿಗೆ ಚೆನ್ನಾಗಿ ಮನವರಿಕೆಯಾಗಲು ಎರಡು ಬಾರಿ ಮೋದಿ ಆಳ್ವಿಕೆ ನಡೆಸಬೇಕಾಯಿತು ಎಂದು ಮಾಜಿ ಸಚಿವ ಬಿ ರಮಾನಾಥ ರೈ ವಿಶ್ಲೇಷಿಸಿದರು.
ಕಾಂಗ್ರೆಸ್ ಪಕ್ಷನ್ನು ಬೂತ್ ಮಟ್ಟದಲ್ಲೇ ಬಲಪಡಿಸುವ ಉದ್ದೇಶದಿಂದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡ ಪಕ್ಷದ ನಾಯಕರ ಪ್ರತಿ ಬೂತ್ ಭೇಟಿ ಕಾರ್ಯಕ್ರಮ “ನಮ್ಮ ನಡೆ ಬೂತ್ ಕಡೆ” ಸಜಿಪಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಬೂತ್ ಗಳಲ್ಲಿ ನಡೆಸಿ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿಂದ ಈ ದೇಶಕ್ಕೆ ಬೇಕಾದ ಸಕಲ ಯೋಜನೆಗಳನ್ನೂ ಒದಗಿಸಿದ ಕೀರ್ತಿ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಕಾಂಗ್ರೆಸ್ ಯಾವತ್ತೂ ದೇಶದ ಬಡವರ, ದೀನ-ದಲಿತರ ಹಾಗೂ ಕೆಳಮಟ್ಟದ ಜನರ ಶ್ರೇಯೋಭಿವೃದ್ದಿ ಮಾಡುವುದರ ಜೊತೆಗೆ ದೇಶದ ಎಲ್ಲಾ ವರ್ಗದ ಜನರ ಸಾಮಾಜಿಕ ನ್ಯಾಯಕ್ಕಾಗಿ ಸದಾ ಶ್ರಮಿಸಿದೆ ಎಂದರು.
ದೇಶದಲ್ಲಿ ಆಡಳಿತ ನಡೆಸುವ ಶಕ್ತಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಮಾತ್ರ ಇದ್ದು, ಕಾಂಗ್ರೆಸ್ ಪಕ್ಷದ ಆಡಳಿತ ಪಕ್ವತೆ ಹಾಗೂ ಬಿಜೆಪಿ ಪಕ್ಷದ ಆಡಳಿತ ವೈಫಲ್ಯತೆಗಳ ನಡುವಿನ ವ್ಯತ್ಯಾಸವನ್ನು ಇಂದಿನ ಜನ ಸಂಪೂರ್ಣವಾಗಿ ಅರಿತುಕೊಂಡಿದ್ದು, ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಗಳಲ್ಲಿ ಪ್ರಬುದ್ದ ಮತದಾರರು ಯಾವುದೇ ಕಾರಣಕ್ಕೂ ಮತಗಳು ಹರಿದು ಹಂಚಿ ಹೋಗದಂತೆ ಎಚ್ಚರ ವಹಿಸಿ ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸರ್ವರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅರ್ಶದ್ ಸರವು, ಸಜಿಪಮುನ್ನೂರು ಗ್ರಾ ಪಂ ಮಾಜಿ ಅಧ್ಯಕ್ಷ ಶರೀಫ್ ನಂದಾವರ, ಉಪಾಧ್ಯಕ್ಷೆ ನಳಿನಿ, ಸಜಿಪಮುನ್ನೂರು ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ಲಾ ಮೋನು ನಂದಾವರ, ಪ್ರಮುಖರಾದ ಫ್ರಾನ್ಸಿಸ್ ಮಾರ್ನಬೈಲು, ಅಝೀಝ್ ಕೊಪ್ಪಳ, ಸೆಲೀನಾ ಕೊಪ್ಪಳ, ಬಶೀರ್ ನಂದಾವರ, ಅಬ್ಬಾಸ್ ನಂದಾವರ, ಅಬ್ಬೊನು ನಂದಾವರ, ದಾವೂದ್ ನಂದಾವರ, ಮುಹಮ್ಮದ್ ನಂದಾವರ ಮೊಲಾದವರು ಭಾಗವಹಿಸಿದ್ದರು. ಸಜಿಪಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್ ಕರಂದಾಡಿ ಸ್ವಾಗತಿಸಿದರು.
ಬೂತ್ ಸಂಖ್ಯೆ 142 ಮಾರ್ನಬೈಲು ಫ್ರಾನ್ಸಿಸ್ ಮನೆ ಬಳಿ, ಬೂತ್ ಸಂಖ್ಯೆ 139 ಬಸ್ತಿಗುಡ್ಡೆ ಅಬ್ಬಾಸ್ ಮನೆ ಬಳಿ ಹಾಗೂ ಬೂತ್ ಸಂಖ್ಯೆ 140-141 ನಂದಾವರ ಜಂಕ್ಷನ್ ಎನ್ ಕೆ ಅಬ್ಬೊನು ಅವರ ಮನೆ ಬಳಿ ಕಾರ್ಯಕ್ರಮ ನಡೆಯಿತು.
0 comments:
Post a Comment