ಬಂಟ್ವಾಳ, ಜನವರಿ 06, 2022 (ಕರಾವಳಿ ಟೈಮ್ಸ್) : ಬಂಟ್ವಾಳ ಲಯನ್ಸ್ ಕ್ಲಬ್ ವತಿಯಿಂದ ಅಮ್ಟಾಡಿ ಗ್ರಾಮದ ನಲ್ಕೆಮಾರ್ ಹಿರಿಯ ಪ್ರಾಥಮಿಕ ಶಾಲೆಗೆ ನಾಮಫಲಕ ಕೊಡುಗೆಯಾಗಿ ನೀಡಲಾಯಿತು. ಲಯನ್ಸ್ ಜಿಲ್ಲಾ ಗವರ್ನರ್ ವಸಂತಿ ಶೆಟ್ಟ ಬುಧವಾರ ನಲ್ಕೆಮಾರ್ ದ್ವಾರದ ಬಳಿ ಈ ನಾಮಫಲಕ ಉದ್ಘಾಟಿಸಿದರು.
ಈ ಸಂದರ್ಭ ಜಿಲ್ಲಾ ಸಂಪುಟ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ, ಹೆಚ್ಚುವರಿ ಕಾರ್ಯದರ್ಶಿ ಲಕ್ಷ್ಮಣ ಅಗ್ರಬೈಲು, ವಲಯಾಧ್ಯಕ್ಷ ಕೃಷ್ಣಶ್ಯಾಮ್, ಬಂಟ್ವಾಳ ಲಯನ್ಸ್ ಕ್ಲಬ್ ಕಾರ್ಯದರ್ಶಿ ಧೀರಜ್ ಎಚ್, ಕೋಶಾಧಿಕಾರಿ ರಾಧಾಕೃಷ್ಣ ಬಂಟ್ವಾಳ, ಸದಸ್ಯ ರಾಘವೇಂದ್ರ ಕಾರಂತ್, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ವಿಜಯ ಕುಮಾರ್, ಮಕ್ಕಳ ವಿದ್ಯಾಭಿವೃದ್ಧಿ ಅಧ್ಯಕ್ಷ ಯೋಗೀಶ್, ಶಾಲಾಬಿವೃದ್ಧಿ ಸಮಿತಿ ಸದಸ್ಯರಾದ ಯಾದವ ಅಗ್ರಬೈಲು, ಜಯರಾಮ ತಲೆಂಬಿಲ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment