ಬಂಟ್ವಾಳ, ಜನವರಿ 06, 2022 (ಕರಾವಳಿ ಟೈಮ್ಸ್) : ತಾಲೂಕಿನ ನಲ್ಕೆಮಾರ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಕಾರ್ಯಾಗಾರ ಮಂಗಳವಾರ ನಡೆಯಿತು. ಚಿತ್ರಕಲಾ ಶಿಕ್ಷಕ ಚೆನ್ನಕೇಶವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಚಿತ್ರಕಲೆಯ ಬಗ್ಗೆ ಮಾಹಿತಿ ನೀಡಿದರು.
1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಕ್ಕಳಿಗೆ ಭಾರತದ ಚಿತ್ರ ಬಿಡಿಸುವುದು, ಅಕ್ಷರದಲ್ಲಿ ಚಿತ್ರ ಬಿಡಿಸುವುದು, ಪ್ರಾಣಿಗಳ ಚಿತ್ರ ರಚಿಸುವುದು ಮೊದಲಾದ ವಿವಿಧ ರೀತಿಯಲ್ಲಿ ಚಿತ್ರಕಲೆಯ ತರಬೇತಿ ನೀಡಲಾಯಿತು.
ಈ ಸಂದರ್ಭ ಮುಖ್ಯ ಶಿಕ್ಷಕಿ ಜ್ಯೋತಿ, ಸಹಶಿಕ್ಷಕಿಯರಾದ ಶಶಿಕಲಾ, ರೇಖಾ ರಾವ್, ಮೋಹಿನಿ, ಮಮತಾ, ಜಗನ್ನಾಥ್, ಸೌಮ್ಯ, ಅಕ್ಷತಾ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment