ಮಂಗಳೂರು, ಜನವರಿ 15, 2022 (ಕರಾವಳಿ ಟೈಮ್ಸ್) : ಅಲ್ಪ ಸಂಖ್ಯಾತ ವರ್ಗದ ಮೆಟ್ರಿಕ್ ನಂತರದ ಅಂದರೆ ಪೆÇೀಸ್ಟ್ ಮೆಟ್ರಿಕ್ ಹಾಗೂ ಮೆರಿಟ್ ಕಂ ಮೀನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಈಗಾಗಲೆ ಎಸ್.ಎಸ್.ಪಿ. (ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್) ಸ್ಕಾಲರ್ ಶಿಪ್ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮಾರ್ಚ್ 31 ಕೊನೆ ದಿನಾಂಕವಾಗಿದೆ.
ಎಸ್.ಎಸ್.ಪಿ. ಅರ್ಜಿ ಸಲ್ಲಿಕೆಗೆ ಎನ್.ಎಸ್.ಪಿ. (ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್) ಅರ್ಜಿ ಸಲ್ಲಿಕೆ ಕಡ್ಡಾಯವಾಗಿದ್ದು, ಎನ್.ಎಸ್.ಪಿ. ಆನ್ ಲೈನ್ ಅರ್ಜಿ ಸಲ್ಲಿಕೆಗೆಗೆ ಜನವರಿ 15 ಕೊನೆ ದಿನಾಂಕವಾಗಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಮೊತ್ತ ಪಡೆಯಲು ಎನ್.ಎಸ್.ಪಿ. ಹಾಗೂ ಎಸ್.ಎಸ್.ಪಿ. ಎರಡೂ ಪೋರ್ಟಲ್ ಗಳಲ್ಲೂ ನೋಂದಾಯಿಸುವುದು ಕಡ್ಡಾಯವಾಗಿದೆ.
ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಮೊತ್ತವನ್ನು ಡಿಬಿಟಿ (ನೇರ ನಗದು ವರ್ಗಾವಣೆ) ಮೂಲಕ ಪಡೆಯಲು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕಿಂಗ್ ಹಾಗೂ ಸೀಡಿಂಗ್ ಮಾಡಿಸಿಕೊಳ್ಳಲು ಜನವರಿ 31 ಕೊನೆ ದಿನಾಂಕವಾಗಿ ಎಂದು ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯ ಜಿಲ್ಲಾ ಅಧಿಕಾರಿ ಆಂಜನಪ್ಪ ಎಸ್ ಅವರು ತಿಳಿಸಿದ್ದಾರೆ.
0 comments:
Post a Comment