ಬಂಟ್ವಾಳ, ಜನವರಿ 01, 2022 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾಧ್ಯಕ್ಷರಾಗಿ ಉದ್ಯಮಿ ಮುಹಮ್ಮದ್ ಹನೀಫ್ ಹಾಸ್ಕೋ ಅವರು ಸರ್ವಾನುಮತದಿಂದ ಮರು ಆಯ್ಕೆಯಾಗಿದ್ದಾರೆ.
ಇಲ್ಲಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಶಾಖಾ ಮಹಾಸಭೆಯಲ್ಲಿ ಈ ಪುನರಾಯ್ಕೆ ಪ್ರಕ್ರಿಯೆ ನಡೆದಿದೆ. ಸಿದ್ದೀಕ್ ಆಬ್ದುಲ್ ಖಾದರ್ ಹಾಗೂ ಅಬ್ದುಲ್ ಖಾದರ್ ಸಜಿಪ ಚುನಾವಣಾಧಿಕಾರಿಗಳಾಗಿ ಭಾಗವಹಿಸಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಉಪಾಧ್ಯಕ್ಷರಾಗಿ ಮಜೀದ್ ಬೋಳಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಎನ್ ಬಶೀರ್, ಕೋಶಾಧಿಕಾರಿಯಾಗಿ ಇಸಾಕ್ ಫೇಶನ್ ವೇರ್, ಗೌರವಾಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಬೋಗೋಡಿ, ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ಶಫೀಕ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಅಝೀಝ್ ಪಿ ಐ, ಪಿ ಬಿ ಅಹಮದ್ ಹಾಜಿ, ರಫೀಕ್ ಇನೋಳಿ, ಅಬ್ದುಲ್ ಜಬ್ಬಾರ್, ಹಾಜಿ ಅಬೂಬಕರ್ ಎನ್ ಬಿ, ಬಶೀರ್ ಕೆ4, ಖಾದರ್ ಪೈಂಟರ್, ಮುಹಮ್ಮದ್ ಸಫ್ವಾನ್, ಮುಹಮ್ಮದ್ ರಿಳ್ವಾನ್, ಯೂಸುಫ್ ಮುಶರ್ರಫ್, ಅಬ್ದುಲ್ ಖಾದರ್ ಉಸೈದ್, ಮುಹಮ್ಮದ್ ಇರ್ಷಾದ್, ಪಾಣೆಮಂಗಳೂರು ಅವರು ಆಯ್ಕೆಯಾದರು.
ಎಸ್ಕೆಎಸ್ಸೆಸ್ಸೆಫ್ ಘಟಕದÀ ಕೌನ್ಸಿಲರ್ ಆಗಿ ಅಬೂಸ್ವಾಲಿಹ್ ಫೈಝಿ, ಖಲೀಲ್ ದಾರಿಮಿ, ಮುಹಮ್ಮದ್ ಝುಬೈರ್ ಯು, ಅಬೂಬಕರ್ ರೆಂಗೇಲ್ ಅವರನ್ನು ನೇಮಕ ಮಾಡಲಾಯಿತು.
ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಶಾದ್ ದಾರಿಮಿ ಅಲ್-ಜಝರಿ ದುವಾ ನೆರವೇರಿಸಿದರು. ಆಲಡ್ಕ ಶಾಖಾಧ್ಯಕ್ಷ ಹನೀಫ್ ಹಾಸ್ಕೊ ಅಧ್ಯಕ್ಷತೆ ವಹಿಸಿದ್ದರು. ಅಬೂಸ್ವಾಲಿಹ್ ಫೈಝಿ ಉಧ್ಛಾಟಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಬಶೀರ್ ಬೇಕರಿ ಲೆಕ್ಕಪತ್ರ ಮಂಡಿಸಿ, ವರದಿ ವಾಚಿಸಿದರು. ಖಲೀಲ್ ದಾರಿಮಿ ಸ್ವಾಗತಿಸಿದರು.
0 comments:
Post a Comment