ನಲ್ಕೆಮಾರ್ ಶಾಲಾ ಅಂಗಳದಲ್ಲಿ ಬಂಟ್ವಾಳ ಅಗ್ನಿಶಾಮಕ ದಳದಿಂದ ಅಗ್ನಿ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರ - Karavali Times ನಲ್ಕೆಮಾರ್ ಶಾಲಾ ಅಂಗಳದಲ್ಲಿ ಬಂಟ್ವಾಳ ಅಗ್ನಿಶಾಮಕ ದಳದಿಂದ ಅಗ್ನಿ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರ - Karavali Times

728x90

22 January 2022

ನಲ್ಕೆಮಾರ್ ಶಾಲಾ ಅಂಗಳದಲ್ಲಿ ಬಂಟ್ವಾಳ ಅಗ್ನಿಶಾಮಕ ದಳದಿಂದ ಅಗ್ನಿ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರ

ಬಂಟ್ವಾಳ, ಜನವರಿ 22, 2022 (ಕರಾವಳಿ ಟೈಮ್ಸ್) : ಬಂಟ್ವಾಳ ಅಗ್ನಿಶಾಮಕ ದಳದ ವತಿಯಿಂದ ನಲ್ಕೆಮಾರ್ ಸರಿಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗ್ನಿ ಅವಘಡದ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಗಾರ ನಡೆಯಿತು. 

ಸಂಯುಕ್ತ ಠಾಣಾಧಿಕಾರಿ ಅನಂತ ಜೆ ಅಂಬಿಗ ಮಾತನಾಡಿ ಬೆಂಕಿಯ ವಿಧಗಳು, ಬೆಂಕಿ ಒಂದು ಶಕ್ತಿ ಎಲ್ಲ ಕಡೆಯಲ್ಲೂ ಇದೆ. ಪ್ಲಾಸ್ಮಾದ ಒಂದು ರೂಪ. ಇದೊಂದು ಉತ್ತಮ ಸೇವಕ ಕೆಟ್ಟ ಯಜಮಾನ ಎಂದು ಹೇಳಿದರು. ಬೆಂಕಿಯ ಅವಘಡ ಎರಡು ರೀತಿಯಲ್ಲಿ ಸಂಭವಿಸುತ್ತವೆ. ಒಂದು ನೈಸರ್ಗಿಕ ಇನ್ನೊಂದು ಮಾನವರ ಅಜಾಗರೂಕತೆ. ಬೆಂಕಿಯನ್ನು ಆರಿಸುವ ವಿಧಾನಗಳು, ಕಚೇರಿಗಳಲ್ಲಿ ಹಾಗೂ ಮನೆಗಳಲ್ಲಿ ವಿದ್ಯುತ್ ಅವಘಡ ಹಾಗೂ ಗ್ಯಾಸ್ ಸೋರುವಿಕೆಯಿಂದ ಮುಂಜಾಗ್ರತಾ ಕ್ರಮಗಳು ಹಾಗೂ ಸಂಭವಿಸಿದರೆ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಬಗ್ಗೆ ಮಾಹಿತಿ ನೀಡಿದರು. 

ಬಳಿಕ ಶಾಲಾ ಮೈದಾನದಲ್ಲಿ ಬಂಟ್ವಾಳ ಅಗ್ನಿ ಶಾಮಕ ಪ್ರಮುಖರಾದ ಮೀರ್ ಮಹಮ್ಮದ್ ಗೌಸ್,  ರಾಜೇಶ್, ಪ್ರಸಾದ್ ಮತ್ತು ದರ್ಣಪ್ಪರವರು ಬೆಂಕಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಶಾಲಾಬಿವೃದ್ಧಿ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ನಲ್ಕೆಮಾರ್ ಶಾಲಾ ಅಂಗಳದಲ್ಲಿ ಬಂಟ್ವಾಳ ಅಗ್ನಿಶಾಮಕ ದಳದಿಂದ ಅಗ್ನಿ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರ Rating: 5 Reviewed By: karavali Times
Scroll to Top