ಬಂಟ್ವಾಳ, ಜನವರಿ 29, 2022 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಡಿವಾಳಪಡ್ಪು ನಿವಾಸಿ ದೇವಪ್ಪ ಮಡಿವಾಳ (60) ಶನಿವಾರ ಬೆಳಗ್ಗೆ ಪಾಣೆಮಂಗಳೂರು ಸಮೀಪದ ನಂದಾವರ ಸೇತುವೆಯಿಂದ ತುಂಬಿದ ತೋಡಿನ ನೀರಿಗೆ ಹಾರಿ ಆತ್ಮ,ಹತ್ಯೆಗೆ ಶರಣಾಗಿದ್ದಾರೆ.
ಇವರು ಪ್ರಗತಿಪರ ಕೃಷಿಕರು ಎನ್ನಲಾಗಿದ್ದು, ತಲೆನೋವು ಮೊದಲಾದ ಸಣ್ಣ ಪುಟ್ಟ ಖಾಯಿಲೆಯಿಂದ ಇವರು ಬಳಲುತ್ತಿದ್ದರು ಎಂದಿರುವ ಸ್ಥಳೀಯರು ಇದೇ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಶಂಕಿಸಿದ್ದಾರೆ. ಶನಿವಾರ ಬೆಳಿಗ್ಗೆ ಮನೆಯಿಂದ ಪಾಣೆಮಂಗಳೂರು ಪೇಟೆಗೆ ಬಂದ ಇವರು ಅಲ್ಲಿಂದ ಅಟೋ ರಿಕ್ಷಾದಲ್ಲಿ ನಂದಾವರ ಕಡೆಗೆ ಬಂದಿದ್ದಾರೆ ಎನ್ನಲಾಗಿದ್ದು, ಈ ರೀತಿ ಬಂದವರು ಶ್ರೀ ಶಾರದಾ ಪ್ರೌಢಶಾಲೆ ಬಳಿ ಇರುವ ನಂದಾವರ ಕಿರು ಸೇತುವೆಯ ಮೇಲಿಂದ ತೋಡಿನಲ್ಲಿ ತುಂಬಿದ ನೀರಿಗೆ ಹಾರಿ ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಗೂಡಿನಬಳಿಯ ಜೀವರಕ್ಷಕ ಈಜುಪಟು ಮುಹಮ್ಮದ್ ಮಮ್ಮು ಅವರ ನೇತೃತ್ವದ ಯುವಕರ ತಂಡ ಮೃತದೇಹ ಮೇಲಕ್ಕೆತ್ತುವಲ್ಲಿ ಸಹಕರಿಸಿದ್ದಾರೆ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಕಳೆದ ಹತ್ತು ದಿನಗಳ ಅವಧಿಯಲ್ಲಿ ಬಂಟ್ವಾಳ ತಾಲೂಕಿನ ನದಿ ನೀರಿನಲ್ಲಿ ದೊರಯುತ್ತಿರುವ ಮೂರನೇ ಮೃತದೇಹ ಇದಾಗಿದೆ. ಜ 19 ರಂದು ಜಲೀಲ್ ಕಾರಾಜೆ ಅವರು ಪಾಣೆಮಂಗಳೂರು ಹೊಸ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಜ 27 ರಂದು ಗೂಡಿನಬಳಿ ನೇತ್ರಾವತಿ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು. ಇದೀಗ ಇಂದು ನಂದಾವರ ಸೇತುವೆಯಿಂದ ಹಾರಿ ದೇವಪ್ಪ ಮಡಿವಾಳ ಸುಸೈಡ್ ಮಾಡಿಕೊಂಡಿದ್ದಾರೆ. ಈ ಎಲ್ಲಾ ಮೃತದೇಹಗಳನ್ನು ಮುಹಮ್ಮದ್ ಮಮ್ಮು ಗೂಡಿನಬಳಿ ನೇತೃತ್ವದ ಈಜುಪಟು ಯುವಕರ ತಂಡ ಮೇಲ್ಕಕೆತ್ತುವಲ್ಲಿ ಸಹಕರಿಸಿದ್ದಾರೆ.
0 comments:
Post a Comment