ಬಂಟ್ವಾಳ, ಜನವರಿ 03, 2022 (ಕರಾವಳಿ ಟೈಮ್ಸ್) : ಲಯನ್ಸ್ ಕ್ಲಬ್ ವಾಮದಪದವು ಪ್ರಕೃತಿ ವತಿಯಿಂದ ಚೆನ್ನೈತ್ತೋಡಿ ಗ್ರಾಮ ಪಂಚಾಯತ್, ಬಾಲಯೇಸು ದೇವಾಲಯ ಕರಿಮಲೆ, ಭಾರತೀಯ ಕಥೋಲಿಕ್ ಯುವ ಸಂಚಲನ ವಾಮದಪದವು ಘಟಕ, ವಾಮದಪದವು ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಆಲದಪದವು ನೂರುಲ್ ಇಸ್ಲಾಂ ಮದರಸ ಮತ್ತು ಮಸೀದಿ ಇವುಗಳ ಸಂಯುಕ್ತ ಸಹಭಾಗಿತ್ವದಲ್ಲಿ ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಗಲ್ಪಾಡಿಯಿಂದ ಮಾವಿನಕಟ್ಟೆವರೆಗೆ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಭಾನುವಾರ ನಡೆಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ಚಂದ್ರ ಆಳ್ವ ಅಭಿಯಾನ ಉದ್ಘಾಟಿಸಿದರು. ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತು ಅಭಿವೃದ್ಧಿ ಅಧಿಕಾರಿ ರಾಜಶೇಖರ ರೈ, ಚರ್ಚ್ ಧರ್ಮಗುರು ಲಿಯೋ ವೇಗಸ್, ಮಸೀದಿ ಧರ್ಮಗುರು ರಫೀಕ್ ಅಜಾದಿ, ಮಸೀದಿ ಅಧ್ಯಕ್ಷ ಹಂಝ ಎ ಬಸ್ತಿಕೋಡಿ, ಕಥೋಲಿಕ್ ಯುವ ಸಂಚಲನ ಅಧ್ಯಕ್ಷೆ ಜ್ಯೋತ್ಸ್ನ ಮೊರಾಸ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಾದ್ರೂ ಮೆನೇಜಸ್, ಎನ್ ಎಸ್ ಎಸ್ ಯೋಜನಾಧಿಕಾರಿ ದಯಾನಂದ್, ಪಂಚಾಯತ್ ಸದಸ್ಯ ನವೀನ್ ಚಂದ್ರ ಶೆಟ್ಟಿ, ಪತ್ರಕರ್ತ ಗೋಪಾಲ ಅಂಚನ್, ಲಯನ್ಸ್ ಸದಸ್ಯ ಯೋಗೀಶ್ ಕಲಸಡ್ಕ ಮೊದಲಾದರು ಭಾಗವಹಿಸಿದ್ದರು.
ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ರಸ್ತೆಯ ಇಕ್ಕೆಲ್ಲಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಿದ ಸದಸ್ಯರು ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಿದರು.
0 comments:
Post a Comment