ಉಪ್ಪಿನಂಗಡಿ, ಜನವರಿ 19, 2022 (ಕರಾವಳಿ ಟೈಮ್ಸ್) : ಇಲ್ಲಿನ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ನೇಂಜ ನಿವಾಸಿ ವಸಂತ ದೇವಾಡಿಗ ಬಿನ್ ಆನಂದ ದೇವಾಡಿಗ ಅವರು ತನ್ನ ಮನೆಯಂಗಳದಲ್ಲಿ ಒಣಗಲು ಹಾಕಿದ ಅಡಿಕೆಯನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ, ಕೃಷ್ಣನಗರ-ಬಡವು ನಿವಾಸಿ ಶೀನಪ್ಪ ಪೂಜಾರಿ ಅವರ ಪುತ್ರ ವಿನಯ ಕುಮಾರ್ (31) ಹಾಗೂ ಕೆಮ್ಮಾಯಿ ಜಂಕ್ಷನ್ ಸವೇಝ್ ಕಾಟೇಜ್ 3ನೇ ಮನೆ ನಿವಾಸಿ ಮುಹಮ್ಮದ್ ರಫೀಕ್ ಅವರ ಪುತ್ರ ಮುಹಮ್ಮದ್ ಜುನೈದ್ (24) ಎಂದು ಹೆಸರಿಸಲಾಗಿದೆ.
ವಸಂತ ದೇವಾಡಿಗ ಅವರ ಮನೆಯಲ್ಲಿ ಜನವರಿ 11 ರಂದು ರಾತ್ರಿ ಅಡಿಕೆ ಕಳ್ಳತನ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕಾರ್ಯಪ್ರವೃತ್ತರಾದ ಪೊಲೀಸರು ಬುಧವಾರ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಜಂಕ್ಷನ್ನಿನಲ್ಲಿ ರಿಕ್ಷಾದಲ್ಲಿದ್ದ ವೇಳೆ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರ ಆರೋಪಿಗಳಿಂದ ಪೊಲೀಸರು ಆಟೋ ರೀಕ್ಷಾ ಹಾಗೂ ಕಳ್ಳತನ ಮಾಡಿದ ಅಡಿಕೆಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ದಯವಿಟ್ಟು ತಂದೆಯ ಹೆಸರುಗಳನ್ನು ಹಾಕಿ ಅವರ ತೇಜೋವಧೆ ಮಾಡಬೇಡಿ, ಅಪರಾಧಿಯ ಹೆಸರು, ವಯಸ್ಸು, ಊರು ಹಾಕಿ ಸಾಕು.
ReplyDelete