ಬಂಟ್ವಾಳ, ಜನವರಿ 30, 2022 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಉಷಾ ಸಮೂಹ ಸಂಸ್ಥೆಗಳ ಮಾಲಕ, ಪತ್ರಕರ್ತ ಹಾಗೂ ಸಾಧನಾ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅವರು ನೇಮಕಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಎಂ ಪಿ ಶ್ರೀನಾಥ್ ಅವರು ವಿಶ್ವನಾಥ ಬಂಟ್ವಾಳ ಅವರನ್ನು ನೇಮಕಗೊಳಿಸಿ ಆದೇಶಿಸಿದ್ದಾರೆ.
ವಿಶ್ವನಾಥ ಬಂಟ್ವಾಳ ಅವರು ದಕ್ಷಿಣ ಕನ್ನಡ ಸವಿತಾ ಸಮಾಜ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ, ಪತ್ರಿಕಾ ಸಂಪಾದಕರಾಗಿ, ಸ್ವರ್ಣೋದ್ಯಮಿಯಾಗಿ, ಉದ್ಯಮಿಯಾಗಿ, ಕೃಷಿಕರಾಗಿ, ಹೈನೋದ್ಯಮಿಯಾಗಿ, ದಕ್ಷಿಣ ಕನ್ನಡ ಜಿಲ್ಲಾ ಸವಿತಾ ಸಮಾಜ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪರಿಯಾಳ ಸಮಾಜ ಸುಧಾರಕ ಸಂಘದ ಮಾಜಿ ಅಧ್ಯಕ್ಷರಾಗಿ, ಕಿಲ್ಪಾಡಿ ಸಾಲಿಯಾನ್ ಶ್ರೀ ನಾಗ ದೇವರ ಹಾಗೂ ದೈವ ದೇವರ ಸಾನಿಧ್ಯದ ಸಮಗ್ರ ಜೀರ್ಣೋದ್ದಾರದ ರೂವಾರಿಯಾಗಿ ಹಲವು ಸೇವೆಗಳನ್ನು ನೀಡಿದ್ದು, ಸಾಧನಾ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಮೂಲಕ ವಿವಿಧ ಸಾಹಿತ್ಯಿಕ-ಸಾಂಸ್ಕøತಿಕ ಚಟುವಟಿಕೆಗಳನ್ನು ಸಂಘಟಿಸಿರುತ್ತಾರೆ.
0 comments:
Post a Comment