ಉಪ್ಪಿನಂಗಡಿ, ಡಿಸೆಂಬರ್ 12, 2021 (ಕರಾವಳಿ ಟೈಮ್ಸ್) : ಪತಿ ತನ್ನ ಪರಿಚಯದ ಮಹಿಳೆಯ ಜೊತೆಗಿದ್ದ ಬಗ್ಗೆ ಆಕ್ರೋಶಗೊಂಡ ಪತ್ನಿ ವಾಹನ ಚಾಲಕನೊಂದಿಗೆ ಸೇರಿ ಮಹಿಳೆಗೆ ಹಲ್ಲೆ ನಡೆಸಿದ ಘಟನೆ ಕಳೆದ ನ 21 ರಂದು ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಮಹಿಳೆಗೆ ಹಲ್ಲೆ ನಡೆಸುವ ಕೃತ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಬಳಿಕ ಇದೀಗ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಹಸೀನಾ ಹಾಗೂ ಅಫ್ರೀದ್ ಎಂಬವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಬಂಟ್ವಾಳ ತಾಲೂಕು, ಕಾವಳಕಟ್ಟೆ ಸಮೀಪದ ಬೆಂಗತ್ತೋಡಿ ನಿವಾಸಿ ಇಬ್ರಾಹಿಂ ಸಾಹೇಬ್ ಅವರ ಪುತ್ರ ಅಬ್ದುಲ್ ರಹಿಮಾನ್ (45) ಅವರು ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಭಾನುವಾರ ಫಿರ್ಯಾದಿ ಸಲ್ಲಿಸಿದ್ದು, ನವೆಂಬರ್ 21 ರಂದು ಮದ್ಯಾಹ್ನ ಸುಮಾರು 12 ರ ವೇಳೆಗೆ ಅಬ್ದುಲ್ ರಹಿಮಾನ್ ತನ್ನ ಗುಜರಿ ಅಂಗಡಿಯಲ್ಲಿ ಪರಿಚಯದ ಶಹನಾಜ್ ಎಂಬವಳೊಂದಿಗೆ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ಅವರ ಪತ್ನಿ ಹಸೀನಾ ಹಾಗೂ ಚಾಲಕ ಅಫ್ರಿದಿ ಎಂಬವರು ಏಕಾಏಕಿ ಬಂದು ಶಹನಾಜ್ ಳನ್ನು ಉದ್ದೇಶಿಸಿ ಬೇವರ್ಸಿ ರಂಡೆ ಇಲ್ಲಿ ನಿನಗೇನು ಕೆಲಸ ನನ್ನ ಗಂಡನೊಂದಿಗೆ ನಿನಗೇನು ಕೆಲಸ ಎಂಬುದಾಗಿ ಅವ್ಯಾಚ್ಯ ಶಬ್ದಗಳಿಂದ ಬೈದು ಹಸೀನಾಳು ಶಹನಾಜ್ ಗೆ ಕೈಯಿಂದ ಮುಖಕ್ಕೆ ಮತ್ತು ತಲೆಗೆ ಹೊಡೆದಿದ್ದು, ನಂತರ ಅಫ್ರೀದನು ಅಲ್ಲಿಯೇ ಇದ್ದ ಪ್ಲಾಸ್ಟಿಕ್ ಪೈಪನ್ನು ತೆಗೆದುಕೊಂಡು ಶಹನಾಜ್‍ಳ ಬೆನ್ನಿಗೆ ಹಾಗೂ ತಲೆಗೆ ಹೊಡೆದಿರುತ್ತಾನೆ, ನಂತರ ಅಫ್ರೀದನು ಶಹನಾಜಳನ್ನು ಉದ್ದೇಶಿಸಿ ಇನ್ನು ಮುಂದಕ್ಕೆ ನೀನು ಇಲ್ಲಿಗೆ ಬಂದಲ್ಲಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಹೇಳಿ ಇಬ್ಬರೂ ಅಲ್ಲಿಂದ ಹೊರಟು ಹೋದರು. ನಂತರ ಶಹನಾಜ್ ಕೂಡಾ ಅಲ್ಲಿಂದ ಹೊರಟು ಹೋಗಿರುತ್ತಾಳೆ. ಈ ಬಗ್ಗೆ ಕಾನೂನಿನ ಅರಿವು ಇಲ್ಲದೇ ಇದ್ದುದರಿಂದ ತಡವಾಗಿ ದೂರು ನೀಡುತ್ತಿರುವುದಾಗಿ ಅಬ್ದುಲ್ ರಹಿಮಾನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 159/2021 ಕಲಂ 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment