ಬಂಟ್ವಾಳ, ಡಿಸೆಂಬರ್ 16, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಿ.ಸಿ.ರೋಡು ಸಮೀಪದ ಅಲೆತ್ತೂರು ಯಕ್ಷಗಾನ ಬಯಲಾಟ ಸಮಿತಿ ಹಾಗೂ ಹತ್ತು ಸಮಸ್ತರು ಪ್ರಸ್ತುತ ಪಡಿಸುವ 9 ನೇ ವರ್ಷದ ಪ್ರಯುಕ್ತ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಸುಂಕದಕಟ್ಟೆಯವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟವು ಡಿಸೆಂಬರ್ 18 ರಂದು ಶನಿವಾರ ರಾತ್ರಿ 9.30 ರಿಂದ ಅಲೆತ್ತೂರು ಶ್ರೀ ಪಂಜುರ್ಲಿ ದೈವದ ಅಮೆಜುಕು ಬಾಕಿಮಾರು ಗದ್ದೆಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದಲ್ಲಿ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾದ ಚರಣ್ ಎಂಬ ವಿದ್ಯಾರ್ಥಿಯನ್ನು ಸನ್ಮಾನಿಸಲಾಗುವುದು.
ಪದವಿ ಪೂರ್ವ ಕಾಲೇಜಿನಲ್ಲಿ ಅತ್ಯಧಿಕ ಅಂಕ ಪಡೆದ ಎರಡು ಕಣ್ಣುಗಳನ್ನು ಕಳೆದು ಕೊಂಡ ಪರ್ಲಿಯ ನಿವಾಸಿ ದಿನೇಶ್ ಎಂಬವರಿಗೆ ಸಹಾಯ ಧನ ನೀಡಿ ಪ್ರೋತ್ಸಾಹಿಸಲಾಗುವುದು.
ಊರ ಭಕ್ತಾಭಿಮಾನಿಗಳಿಂದ ತಾನು ಮನ ಧನಗಳ ಸಹಕಾರದೊಂದಿಗೆ ಹೊರೆ ಕಾಣಿಕೆಯನ್ನು ಸ್ವೀಕರಿಸಲಾಗುವುದು ಎಂದು ಅಲೆತ್ತೂರು ಯಕ್ಷಗಾನ ಬಯಲಾಟ ಸಮಿತಿಯ ಪ್ರಕಟಣೆ ತಿಳಿಸಿದೆ.
0 comments:
Post a Comment