ಬೆಂಗಳೂರು, ಡಿಸೆಂಬರ್ 08, 2021 (ಕರಾವಳಿ ಟೈಮ್ಸ್) : ರಾಜ್ಯ ಮಟ್ಟದ ಪ್ರಥಮ ಕೆಟಿಎ ಓಪನ್ ಟ್ವೆಕಾಂಡೋ ಚಾಂಪಿಯನ್ ಶಿಪ್ ಕೂಟದಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಟ್ವೆಕಾಂಡೋ ಪಟುಗಳು ಚಿನ್ನ, ಬೆಳ್ಳಿ, ಕಂಚು ಸಹಿತ ಒಟ್ಟು 9 ಪದಕಗಳನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬೆಂಗಳೂರು ಕರ್ನಾಟಕ ಟ್ವೆಕಾಂಡೋ ಅಕಾಡೆಮಿ ವತಿಯಿಂದ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ರಾಜ್ಯ ಮಟ್ಟದ ಓಪನ್ ಟ್ವೆಕಾಂಡೋ ಚಾಂಪಿಯನ್ ಶಿಪ್-2021 ಕ್ರೀಡಾಕೂಟದಲ್ಲಿ ಕ್ಯೊರೊಗಿ (ಫೈಟಿಂಗ್), ಪೂಂಸೆ ಹಾಗೂ ಅಯಾ ವಯಸ್ಸಿನ ವಲಯ ಮಿತಿ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡದಿಂದ ಪ್ರತಿನಿಧಿಸಿದ ಟ್ವೆಕಾಂಡೋ ಪಟುಗಳು 6 ಚಿನ್ನ, 2ಬೆಳ್ಳಿ, 1 ಕಂಚು ಪದಕಗಳನ್ನು ಪಡೆದು ಊಟಿಯಲ್ಲಿ ನಡೆಯುವ ರಾಷ್ಟ ಮಟ್ಟದ ಟ್ವೆಕಾಂಡೋ ಚಾಂಪಿಯನ್ ಶಿಪ್ಪಿಗೆ ಆಯ್ಕೆಯಾಗಿದ್ದಾರೆ.
8 ವರ್ಷದೊಳಗಿನ ಫೈಟಿಂಗ್ ವಿಭಾಗದಲ್ಲಿ ಮುಹಮ್ಮದ್ ರಾಹಿಪ್ ಚಿನ್ನ, ಮುಹಮ್ಮದ್ ರಿಹಾಮ್ ಘನಿ ಪೆÇಂಸೆ ವಿಭಾಗದಲ್ಲಿ ಕಂಚಿನ ಪದಕ ಪಡೆದರೆ, 10 ವರ್ಷದೊಳಗಿನ ಫೈಟಿಂಗ್ ವಿಭಾಗದಲ್ಲಿ ಮುಹಮ್ಮದ್ ಮುಸ್ತಫಾ, 12 ವರ್ಷದೊಳಗಿನ ಫೈಟಿಂಗ್ ವಿಭಾಗದಲ್ಲಿ ಮುಹಮ್ಮದ್ ಪೈಝಲ್ ಹಾಗೂ ಪೆÇಂಸೆ ವಿಭಾಗದಲ್ಲಿ ಮುಹಮ್ಮದ್ ಮಿಶಾಲ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
14 ವರ್ಷ ವಯೋಮಾನದ 55 ಕೆಜಿ ವಿಭಾಗದಲ್ಲಿ ಮುಹಮ್ಮದ್ ಅಯಾನ್, 45 ಕೆಜಿ ವಿಭಾಗದಲ್ಲಿ ಮುಹಮ್ಮದ್ ನಿಹಾಲ್ ನಝೀರ್ ಅವರು ಚಿನ್ನದ ಪದಕ ಗೆದ್ದುಕೊಂಡರೆ, 15 ವರ್ಷ ಮೇಲ್ಪಟ್ಟ ವಿಭಾಗದ 18 ವರ್ಷ ವಯೋಮಿತಿ ವಿಭಾಗದಲ್ಲಿ ಮುಹಮ್ಮದ್ ಶಿರ್‍ಹಾನ್ ಹಾಗೂ 20 ವರ್ಷ ವಯೋಮಿತಿಯಲ್ಲಿ ಮುಹಮ್ಮದ್ ಶಾಬಾನ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
2022 ರ ಜನವರಿ ತಿಂಗಳ 7, 8 ದಿನಾಂಕಗಳಲ್ಲಿ ಊಟಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಟ್ವೆಕಾಂಡೋ ಚಾಂಪಿಯನ್ ಶಿಪ್ಪಿನಲ್ಲಿ ಭಾಗವಹಿಸಲು ಇವರು ಅವಕಾಶ ಪಡೆದಿದ್ದಾರೆ.
ಪದಕ ಗೆದ್ದ ಕ್ರೀಡಾಪಟುಗಳು ದಕ್ಷಿಣ ಕನ್ನಡ ಜಿಲ್ಲೆಯ ಟ್ವೆಕಾಂಡೋ ತರಬೇತಿ ಕೇಂದ್ರಗಳಾಗಿರುವ ಪಾಣೆಮಂಗಳೂರಿನ ಫಿಟ್ಟೆಸ್ ಮಲ್ಟಿ ಜಿಂ ಮತ್ತು ಮಾರ್ಷಲ್ ಆಟ್ರ್ಸ್ ಸೆಂಟರ್ ಹಾಗೂ ಸುರತ್ಕಲ್ ಎಕ್ಸ್ಟ್ರೀಂ ಫೈಟ್ ಕ್ಲಬ್ ಕೇಂದ್ರಗಳಲ್ಲಿ ಟ್ವೆಕಾಂಡೋ ತರಬೇತಿ ಪಡೆದಿದ್ದು, ಜಿಲ್ಲಾ ಮುಖ್ಯ ಟ್ವೆಕಾಂಡೋ ತರಬೇತುದಾರ ಇಸಾಕ್ ಇಸ್ಮಾಯಿಲ್ ನಂದಾವರ ಹಾಗೂ ಸಹಾಯಕ ತರಬೇತುದಾರ ಶಾಬಾನ್ ಟಿ ಕೆ ಡಿ ಕುಳಾಯಿ ಅವರು ತರಬೇತಿ ನೀಡಿದ್ದಾರೆ.
0 comments:
Post a Comment