ಬಂಟ್ವಾಳ, ಡಿಸೆಂಬರ್ 22, 2021 (ಕರಾವಳಿ ಟೈಮ್ಸ್) : ತಾಲೂಕಿನ ತೆಂಕಬೆಳ್ಳೂರು ಸಮೀಪದ ಮುಂಡಡ್ಕ ಪರಿಸರದ ನಿವಾಸಿ ಆನಂದ ಅವರ ಮನೆಗೆ ಬುಧವಾರ ರಾತ್ರಿ ಕೋಳಿ ಬೇಟೆ ಅರಸಿ ಬಂದ ಬೃಹತ್ ಗಾತ್ರದ ಹೆಬ್ಬಾವನ್ನು ಸ್ಥಳೀಯ ಯುವಕ ಸಮದ್ ಸುರಕ್ಷಿತವಾಗಿ ಹಿಡಿದು ಕಾಡಿಗೆ ಮರಳಿಸಿದೆ.
ಭಾರೀ ಗಾತ್ರದ ಹೆಬ್ಬಾವು ಇದಾಗಿದ್ದು, ಇಷ್ಟು ಗಾತ್ರದ ಹೆಬ್ಬಾವು ಈ ಹಿಂದೆ ಪರಿಸರದಲ್ಲಿ ಕಂಡು ಬಂದಿಲ್ಲ ಎಂದು ತಿಳಿಸಿರುವ ಸ್ಥಳೀಯರು ಈಗಾಗಲೇ 3 ಕೋಳಿ ಮರಿಗಳನ್ನು ಈ ಹೆಬ್ಬಾವು ನುಂಗಿ ಹಾಕಿದೆ. ಸಮದ್ ಓರ್ವನೇ ಈ ಹೆಬ್ಬಾವನ್ನು ಹಿಡಿಯುವ ಧೈರ್ಯ ತೋರಿದ್ದಾರೆ ಎಂದಿದ್ದಾರೆ. ಈ ಸಂದರ್ಭ ಹರೀಶ್ ಪಡು, ಗಣೇಶ್ ಪಡು, ಅಫ್ಳಲ್ ಕೊಳ್ತಮಜಲು ಮೊದಲಾದವರು ಜೊತೆಗಿದ್ದರು.
0 comments:
Post a Comment