ಬಂಟ್ವಾಳ, ಡಿಸೆಂಬರ್ 28, 2021 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ ಆಶ್ರಯದಲ್ಲಿ 19ನೇ ವರ್ಷದ ಸ್ವಲಾತ್ ವಾರ್ಷಿಕ ಹಾಗೂ 4ನೇ ವರ್ಷದ ಮಜ್ಲಿಸ್ಸುನ್ನೂರ್ ವಾರ್ಷಿಕ ಕಾರ್ಯಕ್ರಮವು ಫೆಬ್ರವರಿ 10 ರಿಂದ 13ರವರೆಗೆ ಇಲ್ಲಿನ ಮಸೀದಿ ವಠಾರದಲ್ಲಿ ನಡೆಯಲಿದೆ.
ಫೆಬ್ರವರಿ 10 ರಂದು ಮಸೀದಿ ಗೌರವಾಧ್ಯಕ್ಷ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರ ನೇತೃತ್ವದಲ್ಲಿ ನಡೆಯುವ ಮಜ್ಲಿಸುನ್ನೂರ್ ವಾರ್ಷಿಕ ಕಾರ್ಯಕ್ರಮದಲ್ಲಿ ಹಾಫಿಳ್ ಹಕೀಂ ಯಮಾನಿ ಮಿತ್ತಬೈಲು ಹಾಗೂ ಸ್ಥಳೀಯ ಮಸೀದಿ ಖತೀಬ್ ಶಾಫಿ ದಾರಿಮಿ ಉಪನ್ಯಾಸಗೈಯುವರು.
ಫೆ. 13 ರಂದು ಸ್ವಲಾತ್ ವಾರ್ಷಿಕ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಕುಕ್ಕಾಜೆ ಹುಸೈನ್ ತಂಙಳ್ ಬಾ-ಅಲವಿ ತಂಙಳ್ ಹಾಗೂ ಇರ್ಶಾದ್ ದಾರಿಮಿ ಮಿತ್ತಬೈಲು ನೇತೃತ್ವ ವಹಿಸಲಿದ್ದಾರೆ. ಫೆ. 11 ರಂದು ಹನೀಫ್ ನಿಝಾಮಿ, ಫೆ. 12 ರಂದು ಅಶ್ಫಾಕ್ ಫೈಝಿ ಹಾಗೂ ಫೆ. 13 ರಂದು ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಉಪನ್ಯಾಸಗೈಯುವರು ಎಂದು ಮಸೀದಿ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
0 comments:
Post a Comment