ಬೆಂಗಳೂರು, ಡಿಸೆಂಬರ್ 29, 2021 (ಕರಾವಳಿ ಟೈಮ್ಸ್) : ಮಸೀದಿಗಳಲ್ಲಿ ಧ್ವನಿ ವರ್ಧಕ ತೆರವು ನಿಲ್ಲಿಸಿ ಈ ಬಗ್ಗೆ ಮೂಡಿರುವ ಗೊಂದಲ ನಿವಾರಿಸುವಂತೆ ಶಾಸಕ ಬಿ. ಝಡ್. ಜಮೀರ್ ಅಹಮದ್ ಖಾನ್ ಅವರು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಪೊಲೀಸ್ ಅಧಿಕಾರಿಗೆ ಮನವಿ ಮಾಡಿರುವ ಜಮೀರ್ ಅಹ್ಮದ್ ಖಾನ್ ಟ್ಯಾಂಕ್ ಗಾರ್ಡನ್ ಮಸೀದಿಯಿಂದ ಇತ್ತೀಚಿಗೆ ಕಾನೂನು ಬಾಹಿರವಾಗಿ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. ಇದರ ವಿರುದ್ಧ ಪ್ರವೀಣ್ ಸೂದ್ ಅವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಇದರಿಂದ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗಿದ್ದು, ಧ್ವನಿವರ್ಧಕಗಳನ್ನು ಮತ್ತೆ ಹಾಕಲು ಅವರು ಒತ್ತಾಯಿಸಿದ್ದಾರೆ.
0 comments:
Post a Comment