ಮಂಗಳೂರು, ಡಿಸೆಂಬರ್ 14, 2021 (ಕರಾವಳಿ ಟೈಮ್ಸ್) : ವ್ಯಕ್ತಿ ತನ್ನ ಜೀವನದಲ್ಲಿ ಪ್ರಾಮಾಣಿಕತೆ, ಸರಳತೆ ಜೊತೆಗೆ ಇಚ್ಛಾ ಶಕ್ತಿಯೊಂದಿಗೆ ಕೆಲಸ ನಿರ್ವಹಿಸಿದಾಗ ಸಮಾಜದಲ್ಲಿ ಗೌರವ ತನ್ನಿಂತಾನೇ ಹುಡುಕಿ ಬರುತ್ತದೆ ಎಂಬುದಕ್ಕೆ ಅಕ್ಷರ ಸಂತ ಹರೇಕಳ ಹಾಜಬ್ಬ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾಂಗ್ರೆಸ್ ಕಾರ್ಮಿಕ ಸಮಿತಿಯ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಬಣ್ಣಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾಂಗ್ರೆಸ್ ಕಾರ್ಮಿಕ ಸಮಿತಿ ಮತ್ತು ಉಳ್ಳಾಲ ಬ್ಲಾಕ್ ಅಸಂಘಟಿತ ಕಾಂಗ್ರೆಸ್ ಕಾರ್ಮಿಕ ಸಮಿತಿ ವತಿಯಿಂದ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹರೇಕಳದಲ್ಲಿ ಕಾಲೇಜು ಆಗಬೇಕೆಂಬ ಹಾಜಬ್ಬರ ಉದ್ದೇಶ ಶೀಘ್ರದಲ್ಲೇ ಈಡೇರಲಿ ಎಂದವರು ಇದೇ ವೇಳೆ ಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾಂಗ್ರೆಸ್ ಕಾರ್ಮಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಬಂಗೇರ ಮುಟ್ಟಿಂಜ, ಉಳ್ಳಾಲ ಬ್ಲಾಕ್ ಅಸಂಘಟಿತ ಕಾಂಗ್ರೆಸ್ ಕಾರ್ಮಿಕ ಸಮಿತಿಯ ಅಧ್ಯಕ್ಷೆ ಕಲಾವತಿ, ಹರೇಕಳ ಪಂಚಾಯತ್ ಅಧ್ಯಕ್ಷ ಬದ್ರುದ್ದೀನ್, ಉಪಾಧ್ಯಕ್ಷೆ ಕಲ್ಯಾಣಿ, ಪಂಚಾಯತ್ ಸದಸ್ಯರಾದ ಸತ್ತಾರ್ ಮೊದಲಾದವರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾಂಗ್ರೆಸ್ ಕಾರ್ಮಿಕ ಸಮಿತಿಯ ಉಪಾಧ್ಯಕ್ಷ ಇಸ್ಮಾಯಿಲ್ ನಾಟೆಕಲ್ ಸ್ವಾಗತಿಸಿ, ಪ್ರಸ್ತಾವನೆಗೈದರು.
0 comments:
Post a Comment