ಬಂಟ್ವಾಳ, ಡಿಸೆಂಬರ್ 19, 2021 (ಕರಾವಳಿ ಟೈಮ್ಸ್) : ಧಾರ್ಮಿಕ ವಿದ್ವಾಂಸ ಶೈಖುನಾ ಶಂಸುಲ್ ಉಲಮಾ (ಖ ಸಿ) ಅವರನ್ನು ನೇರವಾಗಿ ಕಾಣಲು ಸಾಧ್ಯವಾಗಿದ್ದ ಪಾಣೆಮಂಗಳೂರು ಊರಿನಲ್ಲಿ ಇದೀಗ ಅದೇ ಶೈಖುನಾ ಶಂಸುಲ್ ಉಲಮಾ ಅನುಸ್ಮರಣಾ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸುವ ಯೋಗ ಒದಗಿ ಬಂದಿರುವುದು ನಿಜಕ್ಕೂ ಮೈ-ಮನ ರೋಮಾಂಚನಗೊಳ್ಳುವ ಸನ್ನಿವೇಶ ಎಂದು ಪದ್ಮಶ್ರಿ ಪ್ರಶಸ್ತಿ ವಿಜೇತ ಅಕ್ಷರ ಸಂತ ಹರೇಕಳ ಹಾಜಬ್ಬ ಭಾವುಕರಾದರು.
ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾ ವತಿಯಿಂದ ಶನಿವಾರ ರಾತ್ರಿ (ಡಿ 18) ಆಲಡ್ಕ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ವಠಾರದ ಶೈಖುನಾ ಮರ್‍ಹೂಂ ಮಿತ್ತಬೈಲು ಉಸ್ತಾದ್ ವೇದಿಕೆಯಲ್ಲಿ ನಡೆದ ಶಂಸುಲ್ ಉಲಮಾ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಪದ್ಮಶ್ರೀ ವಿಜೇತ ಹರೇಕಳ ಹಾಜಬ್ಬ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಸುಮಾರು 35 ವರ್ಷಗಳ ಹಿಂದೆ ಪಾಣೆಮಂಗಳೂರು ನೇತ್ರಾವತಿ ನದಿ ಮರಳಿನಲ್ಲಿ ನಡೆದ ಸಮ್ಮೇಳನದಲ್ಲಿ ಶೈಖುನಾ ಶಂಸುಲ್ ಉಲಮಾ (ಖ ಸಿ) ಅವರನ್ನು ನೇರವಾಗಿ ಕಣ್ತುಂಬಿಕೊಳ್ಳುವ ಅವಕಾಶ ಬಂದಿತ್ತು. ಅಂದು ನಾವು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೆನಪು ಇಂದು ಅವರ ಸ್ಮರಣಾರ್ಥ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸುವ ಸಂದರ್ಭ ಮತ್ತೆ ಮನದಾಳದಲ್ಲಿ ಬರುತ್ತಿದೆ ಎಂದರು ಸ್ಮರಿಸಿದರು.
ಮುಖ್ಯ ಭಾಷಣಗೈದ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಮಾತನಾಡಿ, ಮನುಷ್ಯ ಇಂದು ಹೊರ ಜಗತ್ತಿನಲ್ಲಿ ವಿವಿಧ ಸ್ಥಾನ-ಮಾನಗಳನ್ನು ಹೊಂದಿ ವಿರಾಜಿಸುತ್ತಿದ್ದರೂ ತನ್ನ ಕೌಟುಂಬಿಕ ಜೀವನದಲ್ಲಿ ಮಾತ್ರ ನೆಮ್ಮದಿಯಿಲ್ಲದ ಬದುಕು ಸವೆಸುವ ಮೂಲಕ ಮಾನಸಿಕ ನೆಮ್ಮದಿಯಿಲ್ಲದೆ ಕೊರಗುತ್ತಿದ್ದಾರೆ. ಧಾರ್ಮಿಕ ಚೌಕಟ್ಟು ಮೀರಿದ ಜೀವನ ಪದ್ದತಿಯೇ ಇದಕ್ಕೆ ಮೂಲ ಕಾರಣ ಎಂದು ವಿಶ್ಲೇಷಿಸಿದರು.
ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಶಾದ್ ದಾರಿಮಿ ಅಲ್-ಜಝರಿ ದುವಾಶಿರ್ವಚನಗೈದರು. ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಅಬೂಸ್ವಾಲಿಹ್ ಫೈಝಿ ಉದ್ಘಾಟಿಸಿದರು. ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಉದ್ಯಮಿ ಅಬ್ದುಲ್ ಲತೀಫ್ ಸಫಾ ಕಾರಾಜೆ, ಗೂಡಿನಬಳಿ ಎಸ್ಕೆಎಸ್ಸೆಸ್ಸೆಫ್ ಶಾಖಾಧ್ಯಕ್ಷ ಹಾಜಿ ಉಬೈದುಲ್ಲಾ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಉಸ್ಮಾನ್ ಹಾಜಿ ಪಾಣೆಮಂಗಳೂರು, ಪ್ರಮುಖರಾದ ಪಿ ಬಿ ಅಹ್ಮದ್ ಹಾಜಿ, ಅಬ್ದುಲ್ ಖಾದರ್ ಹಾಜಿ ಪಾಣೆಮಂಗಳೂರು ಮೊದಲಾದವರು ಭಾಗವಹಿಸಿದ್ದರು.
ಎಸ್ಕೆಎಸ್ಸೆಸ್ಸೆಫ್ ಪ್ರಮುಖರಾದ ಪಿ ಐ ಅಬ್ದುಲ್ ಅಝೀಝ್, ಮಜೀದ್ ಬೋಗೋಡಿ, ರಫೀಕ್ ಇನೋಳಿ, ಸಲಾಂ ಸೆಂಟ್ರಿಂಗ್, ಝುಬೈರ್ ಉಪ್ಪುಗುಡ್ಡೆ, ಇರ್ಶಾದ್ ಆಲಡ್ಕ ಪಡ್ಪು, ಇಸ್ಹಾಕ್ ಫ್ಯಾಶನ್ ವೇರ್, ಅಬ್ದುಲ್ ಮುತಾಲಿಬ್, ಶಾಫಿ ಹಾಜಿ, ಪುತ್ತುಮೋನು, ಇಲ್ಯಾಸ್ ಬೋಗೋಡಿ, ಹನೀಫ್ ಡ್ರೈಫಿಶ್, ಅಬೂಬಕ್ಕರ್ ಎನ್ ಬಿ, ಬಶೀರ್ ಕೆ4, ಖಾದರ್ ಪೈಂಟರ್, ಖಾದರ್ ಮದನಿ, ಅಬೂಬಕ್ಕರ್ ಮೆಲ್ಕಾರ್ ಮೊದಲಾದವರು ಉಪಸ್ಥಿತರಿದ್ದರು.
ಖಲೀಲ್ ದಾರಿಮಿ ಸ್ವಾಗತಿಸಿ, ಅಬ್ದುಲ್ ಬಶೀರ್ ವಂದಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment