ಬಂಟ್ವಾಳ, ಡಿಸೆಂಬರ್ 09, 2021 (ಕರಾವಳಿ ಟೈಮ್ಸ್) : ಹೆಲಿಕಾಪ್ಟರ್ ದುರಂತದಲ್ಲಿ ನಮ್ಮಗಲಿದ ದೇಶದ ಮೂರೂ ಸೇನೆಗಳ ಮುಖ್ಯ ಕಮಾಂಡರ್ ಕ್ಯಾಪ್ಟನ್ ಬಿಪಿನ್ ರಾವತ್ ಅವರಿಗೆ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಬಿ ಸಿ ರೋಡಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ದೇಶದ ವಾಯುಸೇನೆ, ಭೂಸೇನೆ ಹಾಗೂ ನೌಕಾದಳ ಮುಖ್ಯ ಕಮಾಂಡರ್ ಕ್ಯಾಪ್ಟನ್ ಬಿಪಿನ್ ರಾವತ್ ಅವರ ಅಗಲಿಕೆಯಿಂದ ಇಡೀ ಭಾರತ ದೇಶ ಸ್ಥಬ್ದಗೊಂಡಿದ್ದು, ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಹಾಗೂ ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಇದೇ ವೇಳೆ ಮಾಜಿ ಸಚಿವ ಬಿ ರಮಾನಾಥ ರೈ ನುಡಿ ನಮನ ಸಲ್ಲಿಸಿದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಸದಾಶಿವ ಬಂಗೇರ, ಬಿ ಎಂ ಅಬ್ಬಾಸ್ ಅಲಿ, ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ಜಗದೀಶ್ ಕೊಯಿಲ, ವೆಂಕಪ್ಪ ಪೂಜಾರಿ, ಶೇಖರ್ ಬಿ, ಜನಾರ್ದನ ಚೆಂಡ್ತಿಮಾರ್, ಲೋಲಾಕ್ಷ ಶೆಟ್ಟಿ, ನಾರಾಯಣ್ ನಾಯ್ಕ, ಸೀತಾರಾಮ ಶೆಟ್ಟಿ, ರಾಮಣ್ಣ ವಿಟ್ಲ, ಹಾರೂನ್ ರಶೀದ್, ಕಾನ್ಸೆಪ್ಟ್ ಡೇಸ, ದಯಾನಂದ ಶೆಟ್ಟಿ ಅಮೈ, ಪ್ರಭಾಕರ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment